ಸಿರವಾರ : ಪಟ್ಟಣದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.

ಬಾಲಕರ ಕಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ , ಬಾಲಕಿಯರಿಗೆ ದ್ವಿತೀಯ ಸ್ಥಾನ ಲಭಿಸಿದೆ.
ಬಾಲಕರ ಕಬಡ್ಡಿ ತಂಡದ ನಾಯಕ ಆಕಾಶ ಪಾಟೀಲ ಮತ್ತು ಬಾಲಕಿಯರ ತಂಡದ ನಾಯಕಿ ಬಸ್ಸಮ್ಮ ನೇತೃತ್ವದಲ್ಲಿ ಗೆಲುವು ಸಾಧಿಸಲಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ
ಮಂಜುನಾಥ ಪಾಟೀಲ ಮತ್ತು ವಿನೋದ ರೆಡ್ಡಿ, ಕಾಲೇಜಿನ ಪ್ರಾಚಾರ್ಯರಾದ ಕೆ ಸೋಮಶೇಖರ, ಉಪನ್ಯಾಸಕರಾದ ವೈಜನಾಥ, ರಮೇಶ ಪವಾರ , ಬಸವರಾಜ, ಯಲ್ಲನಗೌಡ , ಚಂದ್ರಲೀಲಾ, ರಕ್ಷಿತಾ ಹಾಗು ಪಾಲಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Previous articleಬಲ್ಲಟಗಿ; ಸೌಹಾರ್ದ ಸಂಘದಲ್ಲಿ ₹31.92 ಲಕ್ಷ ಲಾಭ:-ಷೇರುದಾರರಿಗೆ ಶೇ.16% ಡಿವಿಡೆಂಡ್ ಘೋಷಣೆ
Next articleನಿಸ್ವಾರ್ಥ ಸೇವೆಗೆ ನಮನ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಆದಿಲಕ್ಷ್ಮಿಗೆ ಅಭಿನಂದನೆ