​ಸಿರವಾರ: ಗಣೇಶೋತ್ಸವ ಸಂಭ್ರಮದಲ್ಲಿದ್ದ ಪಟ್ಟಣದ ಯುವಕರ ಬಳಗದಲ್ಲಿ ಶೋಕದ ಛಾಯೆ ಆವರಿಸಿದೆ. ಶುಕ್ರವಾರ ಬೆಳಗಿನ ಜಾವಾ ಹೈದರಾಬಾದ್‌ನಿಂದ ಗಣೇಶನ ಮೂರ್ತಿಯನ್ನು ತರುತ್ತಿದ್ದಾಗ ವಿದ್ಯುತ್ ಲೈನ್ ಗೆ ಸಿಲುಕಿ ತಂತಿ ತುಂಡಾಗಿ ಬಿದ್ದ ಪರಿಣಾಮ ಯುವಕನೊಬ್ಬ ಪ್ರಾಣ ಕಳೆದುಕೊಂಡ ಭೀಕರ ಘಟನೆ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

​ಸಿರವಾರ ಪಟ್ಟಣದ ವಿದ್ಯಾನಗರ ನಿವಾಸಿ ಪ್ರೇಮ ಸುಂದರ (26)ಮೃತಪಟ್ಟ ದುರ್ದೈವಿ.

​ಸಂಭವಿಸಿದ್ದು ಹೇಗೆ?
ಹೈದರಾಬಾದ್‌ನಿಂದ ಸಿರವಾರ ಪಟ್ಟಣಕ್ಕೆ ವಾಹನದಲ್ಲಿ ಗಣೇಶನ ಮೂರ್ತಿಯನ್ನು ತರಲಾಗುತ್ತಿತ್ತು. ಅತ್ತನೂರು ಗ್ರಾಮ ತಲುಪುತ್ತಿದ್ದಂತೆ ಮಾರ್ಗ ಮಧ್ಯೆ ಹಾದುಹೋಗಿದ್ದ ಮೇಲ್ಭಾಗದ ವಿದ್ಯುತ್ ಲೈನ್‌ಗೆ ಗಣೇಶ ವಿಗ್ರಹ ಸಿಲುಕಿಕೊಂಡಿದೆ. ಈ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ವಾಹನದಲ್ಲಿದ್ದ ಪ್ರೇಮ್ ಅವರ ಮೇಲೆ ಬಿದ್ದಿದೆ.

​ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ಪ್ರೇಮ್ ಅವರನ್ನು ತಕ್ಷಣವೇ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

​ಘಟನಾ ಸ್ಥಳಕ್ಕೆ ಸಿರವಾರ ಸಿಪಿಐ ಶಶಿಕಾಂತ ಎಂ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
Next articleಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಪ್ರತಿಕ್ಷಾ ಮೇಟಿಗೌಡ ಆಯ್ಕೆ