ರಾಯಚೂರು:ವಿಜಯದಶಮಿ ದಸರಾ ಹಬ್ಬದ ಅಂಗವಾಗಿ ರಾಯಚೂರು ತಾಲೂಕಿನ ಸಿದ್ಧಾಂಪೂರಿನಲ್ಲಿ ಶ್ರೀ ಸನ್ನಿ ಮಹಾರಾಜ್ ಯೂತ್ ಫೋರ್ಸ್ ಸಂಯುಕ್ತಾಶ್ರಯದಲ್ಲಿ ಪುರುಷರಿಗಾಗಿ ರಾಷ್ಟ್ರಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಯ ಸೀಸನ್‌-3 ಆಯೋಜಿಸಲಾಗಿದೆ. ಅಕ್ಟೋಬರ್ 20ರಂದು ಬೆಳಗ್ಗೆ 11 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದ್ದು, ಕ್ರೀಡಾಭಿಮಾನಿಗಳು ಹಾಗೂ ಕಬಡ್ಡಿ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಹಾಗೂ ಯುವ ಮುಖಂಡ ಸನ್ನಿ ಮಹಾರಾಜ್ ಅವರ ಉಪಸ್ಥಿತಿಯಲ್ಲಿ ಕ್ರೀಡಾಕೂಟ ನಡೆಯಲಿದೆ. ಮ್ಯಾಟ್ ಮೇಲೆ ಪಂದ್ಯಾವಳಿ ಆಯೋಜಿಸಲಾಗಿದ್ದು, ಆಟಗಾರರಿಗೆ ಅನುಕೂಲವಾಗುವಂತೆ ಡಿಜಿಟಲ್ ಸ್ಕೋರ್‌ಬೋರ್ಡ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ₹60,001, ದ್ವಿತೀಯ ಬಹುಮಾನವಾಗಿ ₹40,000, ತೃತೀಯ ಬಹುಮಾನವಾಗಿ ₹20,000 ಹಾಗೂ ಚತುರ್ಥ ಬಹುಮಾನವಾಗಿ ₹10,000 ನೀಡಲಾಗುತ್ತದೆ.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರಿಗೆ ಸಮವಸ್ತ್ರ ಕಡ್ಡಾಯವಾಗಿದ್ದು, ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. 200 ಕಿ.ಮೀ.ಗಿಂತ ಹೆಚ್ಚಿನ ದೂರದಿಂದ ಆಗಮಿಸುವ ತಂಡಗಳಿಗೆ ಗುರುತಿನ ಚೀಟಿ ಕಡ್ಡಾಯದೊಂದಿಗೆ ಸಂಸ್ಥೆಯ ವತಿಯಿಂದ ₹3,000 ಪ್ರಯಾಣ ಭತ್ಯೆ ನೀಡಲಾಗುತ್ತದೆ.

ತಂಡಗಳ ನೋಂದಣಿಗೆ ಅಕ್ಟೋಬರ್ 19 ಕೊನೆಯ ದಿನವಾಗಿದ್ದು, ನೋಂದಣಿ ಶುಲ್ಕ ₹500 ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ನರಸಿಂಹಲು (9611090362, 7899966788, 9380403812), ಅರುಣ್ (9148221248), ಮಹಾಂತೇಶ (6362659095), ತಿಮ್ಮಪ್ಪ (9632177390), ಚಂದ್ರು (8861375841) ಅಥವಾ ಉಲ್ಲೇಶ (9113896587) ಅವರನ್ನು ಸಂಪರ್ಕಿಸಬಹುದು.

Previous articleಡಾ. ನಾಗಲಕ್ಷ್ಮಿ ಚೌದರಿ ಜನ್ಮದಿನ: 230 ವೃದ್ಧರಿಗೆ ಅನ್ನಸಂತರ್ಪಣೆ
Next articleಓಂ ಸಾಯಿ ಧ್ಯಾನ ಮಂದಿರದಲ್ಲಿ ಭಿಕ್ಷಾಟನೆ ನಿಷೇಧ ಜಾಗೃತಿ ಪೋಸ್ಟರ್ ಬಿಡುಗಡೆ