ಗಂಗಾವತಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರ ಜನ್ಮದಿನದ ಪ್ರಯುಕ್ತ ಡಾ. ನಾಗಲಕ್ಷ್ಮಿ ಚೌದರಿ ಜೀವನಶ್ರೀ ಟ್ರಸ್ಟ್ (ರಿ.), ಕಾರಟಗಿ ವತಿಯಿಂದ ಗಂಗಾವತಿಯ ನವಜೀವನ ವೃದ್ಧಾಶ್ರಮದಲ್ಲಿ 230 ವೃದ್ಧರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವೃದ್ಧರಿಗೆ ಅನ್ನಸಂತರ್ಪಣೆ ಮಾಡುವುದರ ಜೊತೆಗೆ ಹಣ್ಣುಹಂಪಲು ವಿತರಿಸಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ನಾಗವೇಣಿ ಎಸ್. ಪಾಟೀಲ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಭೀಮೇಶ್ ಕಕ್ಕರಗೋಳ, ಉಪಾಧ್ಯಕ್ಷ ಶರಣಪ್ಪ ಕಕ್ಕರಗೋಳ, ಸದಸ್ಯರಾದ ಶಿವು ಕಕ್ಕರಗೋಳ, ನರಸಪ್ಪ ಕಕ್ಕರಗೋಳ, ಖಜಾಂಚಿ ಹುಸೇನಪ್ಪ ಕಕ್ಕರಗೋಳ, ಸದಸ್ಯ ಪಂಪಾಪತಿ ಜಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. (ನಾಗಲಕ್ಷ್ಮಿ ಚೌದರಿ ಜನ್ಮದಿನ)








