ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಬಳಿಯಲ್ಲಿನ ಪುರಸಭೆಯ ಕುಡಿಯುವ ನೀರಿನ ಕೆರೆಗೆ ವಿಧಾನ ಪರಿಷತ್ ಸದಸ್ಯ ಎನ್. ಎಸ್ .ಬೋಸರಾಜು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ಮಾನ್ವಿ 50 ಸಾವಿರ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸಬೇಕಾಗಿದು ಕೆರೆಯಲ್ಲಿ ಕೇವಲ 3 ಮೀಟರ್ ಗಳಷ್ಟು ಮಾತ್ರ ನೀರಿನ ಸಂಗ್ರಹವಿರುವುದೆ 85ನೇ ವಿತರಣಾ ಕಾಲುವೆಯ ಮೂಲಕ ರೋಟೇಶನ್ ಪದ್ಧತಿಯ ಪ್ರಕಾರ ಎಂಟು ದಿನಗಳವರೆಗೆ ಕೆರೆ ತುಂಬಿಸುವುದಕ್ಕೆ ನೀರನ್ನು ಬಿಡಲಾಗುತ್ತಿದು ಕಾಲುವೆ ನೀರನ್ನು ವ್ಯರ್ಥ ಮಾಡದೆ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದಲ್ಲಿ ಬೇಸಿಗೆಯಲ್ಲಿ ಮಾನ್ವಿ ಪಟ್ಟಣದ ಜನರಿಗೆ ತೀವ್ರವಾದ ಕುಡಿಯುವ ನೀರಿನ ತೊಂದರೆಯಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ರವರಿಗೆ ಸೂಚಿಸಿದರು.ಹಾಗೂ ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರಿನಪೂರೈಸುವ ಅಮೃತ್ ಟು ಯೋಜನೆಯ ಕಾಮಗಾರಿ ನಿಧನಗತಿಯಲ್ಲಿ ನಡೆಯುತ್ತಿದು ಶೀಘ್ರವೇ ಕಾಮಗಾರಿ ಪೂರ್ಣ ಗೊಳಿಸುವಂತೆ ಗುತ್ತಿಗೆ ದಾರರಿಗೆ ಹಾಗೂ ಕುಡಿಯುವ ನೀರು ನೈರ್ಮಾಲ್ಯಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಹಂಪಯ್ಯನಾಯಕ,ಸಿರವಾರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬ್ರಿಜೇಶ್ ಪಾಟೀಲ್. ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ರೌಡ್ರು ಮಹಾಂತೇಶ ಸ್ವಾಮಿ, ಸಾಬೀರ್ ಪಾಷಾ, ಜಯಪ್ರಕಾಶ್, ರಾಮಕೃಷ್ಣ,ಡಿ. ನಾಗೇಶ್ ಕಬ್ಯಾರ್,ಸತ್ತಾರ್ ಬಂಗ್ಲೆವಲೇ,ಕಾಮೇಶ್, ಪುರಸಭೆ ಆರೋಗ್ಯ ನಿರೀಕ್ಷರಾದ ಮಹೇಶ ಕುಮಾರ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು,ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.








