ರಾಯಚೂರು: ಕನ್ನೇರಿಯ ಸಿದ್ದಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಪೂಜ್ಯ ಶ್ರೀ ಸವಿತಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅ.25ರಂದು ರಾಯಚೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಪಂಚಗವ್ಯ ಆಧಾರಿತ ಉಪಚಾರದ ಕುರಿತು ಸಲಹೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. (ಸಿದ್ದಗಿರಿ ನ್ಯಾಚುರಲ್ಸ್)

ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಸಿದ್ದಗಿರಿ ನ್ಯಾಚುರಲ್ಸ್‌ನಲ್ಲಿ ಅನುಭವಸ್ಥ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ, ಪಂಚಗವ್ಯ ಆಧಾರಿತ ಉಪಚಾರ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಲಹೆ ನೀಡಲಾಗುತ್ತದೆ.

ಕಣ್ಣಿನ ನೋವು, ಕೀಲು ನೋವು, ಸಂಧಿವಾತ, ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಥೈರಾಯ್ಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಪಚಾರದ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮವು ನಗರದ ಅಮರೇಶ್ವರ ಆಸ್ಪತ್ರೆ ಪಕ್ಕದ ಸಿ.ಟಿ. ಟಾಕೀಸ್ ರಸ್ತೆಯಲ್ಲಿರುವ ಸಿದ್ದಗಿರಿ ನ್ಯಾಚುರಲ್ಸ್‌ನಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9663968792, 9741856083, 9651951008 ಸಂಪರ್ಕಿಸಬಹುದು.

Previous articleರಾಯಚೂರು ದಸರಾ ಕವಿಗೋಷ್ಠಿ: ಪರಿಸರ ಜಾಗೃತಿಗೆ ಕರೆ
Next articleರಾಯಚೂರಿನಲ್ಲಿ ಉದ್ರಿ ವಿಚಾರಕ್ಕೆ ಕಿರಾಣಿ ಅಂಗಡಿ ಮಾಲೀಕನ ಕೊಲೆ..? (ರಾಯಚೂರು ಕೊಲೆ ಪ್ರಕರಣ)