​ಸಿರವಾರ: ರಾಯಚೂರಿನಲ್ಲಿ ಭಾನುವಾರ ಆಯೋಜಿಸಲಾಗಿರುವ ಶ್ರೀ ಬಾಬಾ ರಾಮದೇವಜಿ ಅವರ ಜನ್ಮ ಮಹೋತ್ಸವದ ಅಂಗವಾಗಿ, ಪಟ್ಟಣದ ರಾಜಸ್ಥಾನ ಮಾರ್ವಾಡಿ ಸಮಾಜದ ಬಾಂಧವರು ಶನಿವಾರ ಸಿರವಾರದಿಂದ ರಾಯಚೂರಿಗೆ ಪಾದಯಾತ್ರೆ ಮೂಲಕ ತೆರಳಿದರು.

​ಮಹಾ ಉತ್ಸವದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9 ಗಂಟೆಗೆ ರಾಯಚೂರಿನ ಸಿಯತಲಾಬಾದ್‌ನಲ್ಲಿರುವ ಆಶಾಪುರು ಫಂಕ್ಷನ್ ಹಾಲ್‌ನಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ರಾಜಸ್ಥಾನದ ಪ್ರಸಿದ್ಧ ಗಾಯಕರಾದ ರವಿ ಚೌಹಾಣ್ ಹಾಗೂ ಶಿವಗಂಜ್ ತಂಡದವರಿಂದ ಭಕ್ತಿಪೂರ್ವಕ ಭಜನಾ ಸಂಧ್ಯಾವಳಿ ನಡೆಯಲಿದೆ ಎಂದು ಸಮಾಜದ ಮುಖಂಡರಾದ ವಿನೋದ ಚೌಹಾಣ್ ಸಿರವಾರ ತಿಳಿಸಿದರು.

​ಭಾನುವಾರ ಬೆಳಿಗ್ಗೆ ಶ್ರೀ ಬಾಬಾ ರಾಮದೇವಜಿ ಮಂದಿರದಲ್ಲಿ ವಿಶೇಷ ಮಹಾ ಆರತಿ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ.

​ಈ ಶ್ರದ್ಧಾ ಭಕ್ತಿಯ ಪಾದಯಾತ್ರೆಯಲ್ಲಿ ರಾಜಸ್ಥಾನ ಮಾರ್ವಾಡಿ ಸಮಾಜದ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 80ಕ್ಕೂ ಹೆಚ್ಚು ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು.
​

Previous articleರೈತರ ಹಿತವೇ ಮೊದಲ ಆದ್ಯತೆ: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಸಭೆ
Next articleಆರೋಗ್ಯ ಸಂಜೀವಿನಿ ಯೋಜನೆ: ಸರ್ಕಾರಿ ನೌಕರರ ಕಡ್ಡಾಯ ನೋಂದಣಿಗೆ ಆರಿಫ್ ಮಿಯಾ ಕರೆ