ಮಾನ್ವಿ:  ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರು ಕೂಡ  ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡದೆ ಇರುವುದರಿಂದ ಮಾನ್ವಿ ತಾಲೂಕಿನ ಭಾಗದ  ರೈತರ ಕೆಳಭಾಗದ ರೈತರ ಜಮೀನಿಗೆ ನೀರು ಸರಿಯಾಗಿ ತಲುಪುತ್ತಿಲ್ಲ ರೈತರ ಬೆಳೆ ಹಾಳಗುತ್ತಿವೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎನ್. ಎಸ್.ಬೋಸುರಾಜು ತಿಳಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯ 69 ನೇ ಮುಖ್ಯ ಕಾಲುವೆಗೆ ಭೇಟಿ ನೀಡಿ ಕಾಲುವೆಯಲ್ಲಿನ ನೀರಿನ ಗೇಜ್ ಪರಿಶೀಲಿಸಿ ಮಾತನಾಡಿ ಕುಡಿಯುವ ನೀರಿನ ಕೆರೆಗಳನ್ನು ಕೂಡ ತುಂಬಿಸುವುದಕ್ಕೆ ಅಗತ್ಯವಾದ ನೀರು ಕೂಡ ಸರಿಯಾಗಿ ಕಾಲುವೆಯಲ್ಲಿ ಸರಿಯಾಗಿ ನೀರು ಹರಿಸದೆ ಇರುವುದರಿಂದ ಸರಕಾರದ ಮೇಲೆ ರೈತರು ಶಾಪವನ್ನು ಹಾಕುತ್ತಿದ್ದಾರೆ ಬೇಸಿಗೆಗೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲಾಗುತ್ತಿದು ಕೆರೆಗಳಿಗೆ ಅಗತ್ಯ ನೀರು ಹರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಎಸ್.ಐ.ಸತ್ಯನಾರಾಯಣ ಶೆಟ್ಟಿ ಹಾಗೂ ಸಿರವಾರ ವಿಭಾಗದ ಸಹಾಯಕ ಅಭಿಯಂತರರಾದ ವಿಜಯಲಕ್ಷ್ಮಿ ರವರಿಗೆ ಸೂಚಿಸಿದರು.

ಶಾಸಕ ಹಂಪಯ್ಯನಾಯಕ ಮಾತನಾಡಿ ನಮ್ಮ ಭಾಗದ ರೈತರಿಗೆ ನೀರು ಕೊಡುವಲ್ಲಿ ಸಂಪೂರ್ಣವಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು ನಿಮ್ಮಂತ ಅಧಿಕಾರಿಗಳನ್ನು ನಮ್ಮ ಜಿಲ್ಲೆಯಲ್ಲಿ ಇಟ್ಟುಕೊಂಡು  ನಮಗೆ ರೈತರು ಶಾಪವನ್ನು ಹಾಕುತ್ತಿದ್ದಾರೆ ಕನಿಷ್ಠ ಪಕ್ಷ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಗಾದರೂ ನಿಮ್ಮ ನಿಷ್ಠೆಯನ್ನು ಪ್ರದರ್ಶಿಸಿ ಗ್ರಾಮದ ಜನರಿಗೆ ನೀರನ್ನು ಒದಗಿಸಿ ಎಂದು ಒತ್ತಾಯಿಸಿದರು.

ಮುಖಂಡರಾದ  ಜಯವಂತರಾವ್ ಪತಂಗೆ, ಪಂಚ ಗ್ಯಾರಂಟಿಗಳ ಸಮಿತಿ ತಾಲೂಕು ಅಧ್ಯಕ್ಷರಾದ ಬಿ.ಕೆ. ಅಮರೇಶಪ್ಪ ವಕೀಲರು, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ವಸಂತ್ ಕೊಡ್ಲಿ, ಸತ್ತಾರ್ ಬಂಗ್ಲೆವಲೇ, ಸೇರಿದಂತೆ ಇನ್ನಿತರರು ಇದ್ದರು. 

Previous articleರಾಯಚೂರಿನಲ್ಲಿ ಇನ್ಮುಂದೆ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ: ನ.23ರಿಂದ ಹೊಸ ವ್ಯವಸ್ಥೆ ಜಾರಿ
Next articleನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್