ಸಿರವಾರ: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯ (ಕೆಎಎಸ್‌ಎಸ್‌) ಪೂರ್ಣ ಪ್ರಯೋಜನ ಪಡೆಯಲು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರರು ತಕ್ಷಣವೇ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಆರಿಫ್ ಮಿಯಾ ಮನವಿ ಮಾಡಿದ್ದಾರೆ.

​ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ (Cashless) ವೈದ್ಯಕೀಯ ಚಿಕಿತ್ಸೆ ಒದಗಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರದ ಎಲ್ಲ ಇಲಾಖೆಯ ನೌಕರರು HRMS-1 ತಂತ್ರಾಂಶದ ಮೂಲಕ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

​ನೌಕರರ ಸೇವಾ ಹಿತದೃಷ್ಟಿಯಿಂದ ತಮ್ಮ ಹೆಸರು, ಆಧಾರ್ ಕಾರ್ಡ್ ವಿವರ ಹಾಗೂ ಮೊಬೈಲ್ ಸಂಖ್ಯೆಯಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಸರಿಪಡಿಸಿಕೊಂಡು, ಸಂಬಂಧಪಟ್ಟ ಡಿಡಿಒ (DDO) ಗಳಿಗೆ ಅರ್ಹ ಕುಟುಂಬದ ಸದಸ್ಯರ ಸಮಗ್ರ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Previous articleಬಾಬಾ ರಾಮದೇವಜಿ ಜಯಂತಿ: ಸಿರವಾರದ ಮಾರ್ವಾಡಿ ಸಮಾಜದವರಿಂದ ಭಕ್ತಿಪೂರ್ವಕ ಪಾದಯಾತ್ರೆ
Next articleವಾರ್ಡ್ ನಂ.22ರ ಮನೆ-ಮನೆಗೆ ಭೇಟಿ: ನಿವಾಸಿಗಳ ಸಮಸ್ಯೆ ಆಲಿಸಿದ ರಾಮನಗೌಡ ಏಗನೂರು