​ಸಿರವಾರ ಸೆ10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸಿರವಾರ ತಾಲೂಕು, ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ಮಹಿಳಾ ಜ್ಞಾನ ವಿಕಾಸ’ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಶ್ರೀ ಈಶ್ವರ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಲಾಗಿತ್ತು.

​ಈ ಕಾರ್ಯಕ್ರಮದ ಉದ್ಘಾಟನೆಯನ್ನು
​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗ ಕೊಪ್ಪಳದ ಪ್ರಾಂತೀಯ ನಿರ್ದೇಶಕರು ಜಿ. ಚಂದ್ರಶೇಖರ್, ರಾಯಚೂರಿನ ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅರಿಕೇರಿ ಬಸವಲಿಂಗಪ್ಪ ಸಾಹುಕಾರ, ಅಯ್ಯನಗೌಡ ಏರಡ್ಡಿ ನೆರವೇರಿಸಿದರು.

​ವಿಚಾರಗೋಷ್ಠಿಯಲ್ಲಿ “ಮನೆ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಕುರಿತು ಶಾಂತಿ ನಿಕೇತನ ಪ್ರೌಢಶಾಲೆ ಸಿರವಾರದ ಶಿಕ್ಷಕಿ ನೇತ್ರಾವತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಅತ್ಯುತ್ತಮ ಉಪನ್ಯಾಸ ನೀಡಿದರು.

​ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಯ್ದ ಅಸಹಾಯಕ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು.

ಯೋಜನಾಧಿಕಾರಿ ಸಂದೀಪ್ ನಾಯ್ಕ್, ವಲಯದ ಜ್ಞಾನ ವಿಕಾಸ ಸಂಘದ ಅಂಬಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಯಶೋಧಾ, ಮೇಲ್ವಿಚಾರಕರಾದ ವನಿತಾ, ಪ್ರಕಾಶ ಸೇರಿದಂತೆ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಸೇರಿದಂತೆ ಸಿರವಾರ ತಾಲೂಕಿನ ಅನೇಕ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Previous articleದಕ್ಷಿಣ ಭಾರತದ 5 ರೈಲು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ₹10,021 ಕೋಟಿ ಅನುಮೋದನೆ
Next articleಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ತಂತಿ ತಾಗಿ ದುರಂತ, ಯುವಕ ಸಾವು