ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಅಂಗವಾಗಿ ವೀರವನಿತೆ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ 18 ನೇ ಶತಮಾನದಲ್ಲಿ ಚಿತ್ರದುರ್ಗದ ಕೋಟೆಯ ಪಾಳೆಗಾರರಾಗಿದ್ದ ಮದಕರಿನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಪತ್ನಿಯಾಗಿದ ಇವರು ಒಮ್ಮೆ ಹೈದಾರಾಲಿಯ ಸೈನಿಕರು ಕೋಟೆಯನ್ನು ಕಿಂಡಿಯ ಮೂಲಕ ಪ್ರವೇಶ ಮಾಡುತ್ತಿರುವುದನ್ನು ಕಂಡು ಒನಕೆ ಇಂದ ಶತ್ರ ಸೈನಿಕರನ್ನು ಸಂಹರಿಸುವ ಮೂಲಕ ಕೋಟೆಯ ರಕ್ಷಣೆಯನ್ನು ಮಾಡಲು ಕಾರಣರಾದರು ನಾಡಿನ ವೀರ ವನಿತೆಯರ ಸಾಲಿನಲ್ಲಿ ವೀರವನಿತೆ ಒನಕೆ ಓಬವ್ವ ರವರಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ ಪ್ರತಿಯೊಬ್ಬ ಮಹಿಳೆ ಕೂಡ ಒನಕೆ ಓಬವ್ವ ರವರ ಧೈರ್ಯ,ಸಾಹಸ,ಶೌರ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದರು.








