ಮಾನ್ವಿ: ಪಟ್ಟಣದ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಂಘದಿಂದ ನಡೆದ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ರವರ ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್‌ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಶಾಸಕ ಹಂಪಯ್ಯನಾಯಕ ಮಾತನಾಡಿ, ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ರವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು. ಟಿಪ್ಪು ಸುಲ್ತಾನ್‌ರವರ ಧೈರ್ಯ ಮತ್ತು ಸಾಹಸಗಳನ್ನು ಮೆಚ್ಚಿ ಜನರು ಮೈಸೂರಿನ ಹುಲಿ ಎನ್ನುವ ಬಿರುದನ್ನು ನೀಡಿದ್ದರು. ದೇಶಕ್ಕಾಗಿ ಹೋರಾಡಿ ಮಹಾನ್ ಪರಾಕ್ರಮಿಯಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತನ್ನ ರಾಜ್ಯದ ಪ್ರಜೆಗಳಿಗಾಗಿ ತನ್ನ ಇಬ್ಬರು ಮಕ್ಕಳನ್ನು ಕೂಡ ಒತ್ತೆಯಿಟ್ಟವರು. ಅವರ ಸರ್ವಧರ್ಮ ಸಹಿಷ್ಣುತೆ, ದೇಶಭಕ್ತಿಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಸಜ್ಜಾದ್ ಹುಸೇನಿ ಮತವಾಲೆ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾದ ಮಹಬೂಬ್ ಕುರೇಶಿ, ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಬಿ.ಕೆ. ಅಮರೇಶಪ್ಪ ವಕೀಲರು, ಸೈಯದ್ ಖಾಲಿದ್ ಖಾದ್ರಿ, ಎ. ಬಾಲಸ್ವಾಮಿ ಕೊಡ್ಲಿ, ರಾಜ ಸುಭಾಷ್ ಚಂದ್ರನಾಯಕ್, ಜಿಲಾನಿ ಖುರೇಷಿ, ಖಲೀಲ್ ಖುರೇಷಿ, ಸಿದಲಿಂಗಪ್ಪ ವಕೀಲರು, ಸೈಯದ್ ಹುಸೇನ್, ಚಾಂದ್ ಪಾಷಾ ಗುತ್ತೇದಾರರು, ಹೆಚ್.ಬಿ.ಎಂ. ಬಾಷಾ, ಸತ್ತಾರ್ ಬಂಗ್ಲೆವಾಲೆ, ರಸುಲ್ ಕುರೇಶಿ, ಶೇಕ್ ಮಹಿಬೂಬ್ ಖುರೇಷಿ, ಇಬ್ರಾಹಿಂ ಕುರೇಶಿ, ನಾಸಿರ್ ಅಲಿ ಕುರೇಶಿ, ರೆಹಮತ್ ಅಲಿ, ಏಕೆ ಜಾಗೀರ್ದಾರ್, ಜೆ.ಎಚ್. ದೇವರಾಜ್ ಸೇರಿದಂತೆ ಇನ್ನಿತರರು ಇದ್ದರು.

Previous articleವಾಲ್ಮೀಕಿ ವಿವಿ : ಇಂಗ್ಲಿಷ್ ವಿಭಾಗ ಮತ್ತು ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಒಂದು ದಿನದ ವಿಚಾರ ಸಂಕೀರಣ
Next articleವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ