ಸಿರವಾರ: “ಇತಿಹಾಸದ ಪುಟಗಳಲ್ಲಿ ಟಿಪ್ಪು ಸುಲ್ತಾನ್ ಕೇವಲ ಒಬ್ಬ ರಾಜನಾಗಿ ಉಳಿದಿಲ್ಲ, ಬದಲಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮ ಇಂದಿನ ಯುವಸಮೂಹಕ್ಕೆ ಪ್ರೇರಣೆಯಾಗಬೇಕು” ಎಂದು ಜಿ. ಹಂಪಯ್ಯ ನಾಯಕ ಹೇಳಿದರು.

​ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಗುರುವಾರ ಸಂಭ್ರಮದಿಂದ ನಡೆದ ಸಮಾರಂಭದಲ್ಲಿ, ಟಿಪ್ಪು ಸುಲ್ತಾನ್ ಅವರ ಭಾವಚಿತ್ರವಿರುವ ನೂತನ ನಾಮಫಲಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಟಿಪ್ಪು ಅವರ ಆಡಳಿತ ಹಾಗೂ ಸಾಹಸಗಾಥೆಗಳನ್ನು ಸ್ಮರಿಸಿದ ಅವರು, ಇಂತಹ ಮಹನೀಯರ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಳ್ಳುವಂತೆ ಮಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

​ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಹಾಜಿ ಚೌದ್ರಿ, ಮಾಜಿ ಜಿ.ಪಂ ಸದಸ್ಯ ಕೆ. ಅಸ್ಲಾಂ ಪಾಷ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಎಂ.ಡಿ. ವಾಹೀದ್, ಪ್ರಮುಖರಾದ ಎನ್. ಉದಯ ಕುಮಾರ್ ಸಾಹುಕಾರ, ರಮೇಶ ದರ್ಶನಕರ್, ಎಚ್.ಕೆ. ಶಿವಗೇನಿ, ಮಂಜೂರ್ ಹಸನ್ ಖಾಜಿ, ಅಬ್ರಹಾಂ ಹೊನ್ನಟಗಿ, ಮಹ್ಮದ್ ಹುಸೇನ್, ಸದಸ್ಯರಾದ ಹಸೇನಲಿ ಸಾಬ್, ಮೌಲಸಾಬ್ ವರ್ಚಸ್, ಸೂರಿ ದುರುಗಣ್ಣ ನಾಯಕ, ಅಜೀತ್ ಕುಮಾರ್ ಹೊನ್ನಟಗಿ, ಅಮರೇಶ ಗಡ್ಲ, ಮಾರ್ಕಂಡಪ್ಪ, ಮಲ್ಲಿಕಾರ್ಜುನ, ಮುಖಂಡರಾದ ಚನ್ನಬಸವ ಗಡ್ಲ, ವಿಜಯಲಕ್ಷ್ಮಿ ಆದೆಪ್ಪ ಸಾಹುಕಾರ, ಮಲ್ಲಪ್ಪ ಕಜ್ಜಿ, ಬಂದೇನವಾಜ್, ಇರ್ಫಾನ್ ಬಡೆಘರ್, ಕೆ. ರಾಘವೇಂದ್ರ ಖಾಜನಗೌಡ, ಅರಳಪ್ಪ ಯದ್ದಲದಿನ್ನಿ, ದೇವಪುತ್ರಪ್ಪ, ಎಂ. ಮನೋಹರ್ ಹಾಗೂ ಶಾಲಂ ಕಾಶ್ಮೀರಿ ಭಾಗವಹಿಸಿದ್ದರು.

Previous articleಗೊಲ್ಲದಿನ್ನಿ ಎಸ್ಕೇಪ್ ಮುಖಾಂತರ ಕೊನೆ ಹಂತದ ಗ್ರಾಮದವರೆಗೆ ನೀರು ಹರಿಸುವಂತೆ ಶಿವಶಂಕರಯ್ಯ ಸ್ವಾಮಿ ಮನವಿ
Next articleಕೂಡ್ಲೂರು ಗ್ರಾಮದಲ್ಲಿ ₹1.72 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಬಸನಗೌಡ ದದ್ದಲ್ ಚಾಲನೆ