ಮಾನ್ವಿ: ಗೊಲ್ಲದಿನ್ನಿ ಎಸ್ಕೇಪ್ ಮುಖಾಂತರ ಕೊನೆ ಹಂತದ ನಸ್ಸಾಪುರ, ನಂದಿಹಾಳ, ರಾಜಲದಿನ್ನಿ, ಯರಮಲದೊಡ್ಡಿ, ಮುಷ್ಟೂರು, ರಂಗದಾಳ, ಬುದ್ದಿನ್ನಿ ಗ್ರಾಮಗಳಿಗೆ ನೀರು ಹರಿಸುವಂತೆ ಗ್ರಾಮಸ್ಥರು  ಆಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ಮಾಜಿ ಅಧ್ಯಕ್ಷರಾದ ಶಿವಶಂಕರಯ್ಯ ಸ್ವಾಮಿ ಮಾತನಾಡಿ, “ಈಗಾಗಲೇ ನೀಡಿದ ಭರವಸೆಯಂತೆ ನೀರು ಬಿಟ್ಟಿದ್ದೀರಿ. ನಿನ್ನೆ ನ.19 ರಿಂದ  ಗೊಲ್ಲದಿನ್ನಿ ಎಸ್ಕೇಪ್ ಮುಖಾಂತರ ನೀರು ಬಿಡಲಾಗಿದೆ . ಇಲ್ಲಿವರೆಗೆ ಅಮರಾವತಿ ಗ್ರಾಮದವರೆಗೆ ಮಾತ್ರ ನೀರು ತಲುಪಿದೆ. ಇನ್ನು ಕೊನೆ ಹಂತದ ನಸ್ಸಾಪುರ, ನಂದಿಹಾಳ, ರಾಜಲದಿನ್ನಿ, ಯರಮಲದೊಡ್ಡಿ, ಮುಷ್ಟೂರು, ರಂಗದಾಳ, ಬುದ್ದಿನ್ನಿ ವರೆಗೆ ಇನ್ನೂ ನೀರು ತಲುಪಿಲ್ಲ. ಅದರಿಂದ ಯಾವುದೇ ರೀತಿಯಲ್ಲಿ ಜನ ಜಾನುವಾರುಗಳಿಗೆ ಮೋಸ ಮಾಡದೇ ಕೂನೆ ಹಂತದವರೆಗೆ ನೀರು ಹರಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಮನವಿ‌ ಮಾಡಿದರು.

ಈ ಸಂಧರ್ಭದಲ್ಲಿ ಭೋಗವತಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶಿವಶಂಕರಯ್ಯ ಸ್ವಾಮಿ ರಾಜಲದಿನ್ನಿ,   ರಾಮಕೃಷ್ಣ ಅಮರಾವತಿ. ಶರಣಪ್ಪ ನಾಯಕ್,  ಈರಯ್ಯ ಪೂಜಾರಿ, ರಾಜಲದಿನ್ನಿ. ಹನುಮಂತ ಜೂಲ್ಪಿ ಯರಮಲದೊಡ್ಡಿ , ಮಲ್ಲೇಶಿ ಮುಸ್ಟೂರು, ಕೃಷ್ಣ ನಾಯಕ, ಮುಸ್ಟೂರು, ಗಾದಿಲಿಂಗಪ್ಪ ಬುದ್ದಿನ್ನಿ. ಕೃಷ್ಣಪ್ಪ ರಂಗದಾಳ, ಅಂಬಣ್ಣ ಮದ್ಲಾಪುರ್. ಅಮರೇಗೌಡ ಪೊಲೀಸ್ ಪಾಟೀಲ್ ಇದ್ದರು.

Previous articleಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಮೀನಾಮೇಷ: ಹೋರಾಟಕ್ಕೆ ಕರವೇ ಬೆಂಬಲ- ಅಶೋಕ‌ ಕುಮಾರ ಜೈನ್
Next article​ಟಿಪ್ಪು ವೃತ್ತದಲ್ಲಿ ನಾಮಫಲಕ ಅನಾವರಣ: ಯುವಪೀಳಿಗೆಗೆ ಶೌರ್ಯಕ್ಕೆ ಸ್ಫೂರ್ತಿ ಟಿಪ್ಪು -ಹಂಪಯ್ಯ ನಾಯಕ