{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ರಾಯಚೂರು: ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗನೋಡಿ ಸೀಮಾಂತರದ ಹೊಲವೊಂದರಲ್ಲಿ 41 ವರ್ಷದ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಕೆ.ಟಿ. ದೊಡ್ಡಿ ಮಂಡಲದ ನಂದಿನ್ನಿ ಗ್ರಾಮದ ಬಾಪುರ ಮಾರೆಮ್ಮ (41) ಮೃತಪಟ್ಟ ಮಹಿಳೆ. ಇವರು ಕಳೆದ ಎರಡು ವರ್ಷಗಳಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಿರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆಗಾಗ ಮನೆಯಿಂದ ಹೊರಹೋಗಿ ಒಂದು ವಾರದ ಬಳಿಕ ಮರಳಿ ಬರುತ್ತಿದ್ದರು ಎನ್ನಲಾಗಿದೆ.

ಅ.27ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯಿಂದ ಹೊರಹೋಗಿದ್ದ ಮಾರೆಮ್ಮ, ಅ.28ರಂದು ಬೆಳಗ್ಗೆ 7 ಗಂಟೆಯ ಅವಧಿಯಲ್ಲಿ ಸಿಂಗನೋಡಿ ಸೀಮಾಂತರದ ಭೀರಪ್ಪ ತಿಕ್ಕಯ್ಯ ಎಂಬುವವರ ಹೊಲದಲ್ಲಿ ಕಾನಗಿ ಗಿಡಕ್ಕೆ ಸ್ಪ್ರಿಂಕ್ಲರ್ ಪೈಪ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರಬಹುದು ಎಂದು ಪುತ್ರ ಬಿ.ವೀರಣ್ಣ ದೂರಿನಲ್ಲಿ ತಿಳಿಸಿದ್ದಾರೆ. ತಾಯಿಯ ಸಾವಿನಲ್ಲಿ ಯಾರ ಮೇಲೂ ಸಂಶಯವಿಲ್ಲವೆಂದೂ ಅವರು ಹೇಳಿದ್ದಾರೆ.

ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Previous articleಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026: ಅ.30ರಿಂದ ರಾಜ್ಯಾದ್ಯಂತ ಆರಂಭ
Next articleಚಿಕ್ಕಸುಗೂರಿನಲ್ಲಿ ಅ.30ರಂದು ಸಿದ್ದರಾಮೇಶ್ವರ ಮಹಾರಥೋತ್ಸವ: ಭಕ್ತಸಾಗರ ನಿರೀಕ್ಷೆ