ಮಾನ್ವಿ : ಪಟ್ಟಣದ ಬಿ.ವಿ.ಎಂ. ಆಗ್ರೋ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ ನೂತನ ಭತ್ತ ಒಣಗಿಸುವ ಯಂತ್ರಕ್ಕೆ ವಿಧಾನ ಪರಿಷತ್ತಿನ ಸದಸ್ಯ ಎನ್. ಎಸ್. ಬೋಸುರಾಜು ಚಾಲನೆ ನೀಡಿ ಮಾತನಾಡಿ ಈ ಭಾಗದಲ್ಲಿನ ಭತ್ತ ಬೆಳೆಯುವ ರೈತರಿಗೆ ಈ ಯಂತ್ರದ ಮೂಲಕ ಅನುಕೂಲವಾಗಲಿ , ಕೃಷಿಗೆ ಪೂರಕವಾದ ಕೈಗಾರಿಕೆಗಳು ತಾಲೂಕಿನಲ್ಲಿ ಪ್ರಾರಂಭವಾದಲ್ಲಿ ತಾಲೂಕಿನ ಆರ್ಥಿಕ ಪ್ರಗತಿಗೆ ಸಹಾಕರಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ , ಕೈಗಾರಿಕೋದ್ಯಮಿಗಳಾದ ವೀರಭದ್ರಪ್ಪ ಗೌಡ ಅಲ್ದಾಳ್, ಸಿದ್ದಪ್ಪಗೌಡ ಅಲ್ದಾಳ್,ಬಸವನಗೌಡ ಅಲ್ದಾಳ್ ಸೇರಿದಂತೆ ಮುಖಂಡರಾದ ರೌಡ್ರು ಮಹಾಂತೇಶ್ ಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಲ್ಲಪ್ಪಗೌಡ ಖರಾಬದಿನ್ನಿ, ಶರಣಯ್ಯ ನಾಯಕ್ ಕೆ. ಗುಡದಿನ್ನಿ ,ದೇವೇಂದ್ರಪ್ಪ ಬೊಮ್ಮನಹಳ್ಳ, ರಾಜಾ ಸುಭಾಷ್ ಚಂದ್ರ ನಾಯಕ್, ಸತ್ತಾರ್ ಬಂಗ್ಲೆವಲೇ, ವಿಜಯಕುಮಾರ್ ಗೌಡ,ಬೀರಪ್ಪ ಬಲ್ಲಟಗಿ, ಮಹಾಂತೇಶ್ ನಕ್ಕುಂದಿ, ರಂಗನಾಥ್ ನಾಯಕ್, ಕಾಮೇಶ್, ಹಂಪಯ್ಯ ನಾಯಕ್, ರಫೀ, ವೀರೇಶ್ ನಾಯಕ್ ಸೇರಿದಂತೆ ಇನ್ನಿತರರು ಇದ್ದರು.

Previous articleಟೆಂಟ್ ಮುಕ್ತ ಅಲೆಮಾರಿ ಸಮಾಜವೇ ನಮ್ಮ ಸಂಕಲ್ಪ: ನಿಗಮ ಅಧ್ಯಕ್ಷೆ ಪಲ್ಲವಿ.ಜಿ
Next articleರೊಬೋಟಿಕ್ ತಂತ್ರಜ್ಞಾನದಿಂದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ; ಕಡಿಮೆ ನೋವು, ಶೀಘ್ರ ಚೇತರಿಕೆಗೆ ಸಹಕಾರಿ