ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರದಲ್ಲಿ ವಿಜಯದಶಮಿ ಅಂಗವಾಗಿ ಆಯುಧ ಪೂಜೆ ನೆರವೇರಿಸಲಾಯಿತು. ಕೇಂದ್ರದಲ್ಲಿರುವ ಕೃಷಿ ಯಂತ್ರೋಪಕರಣಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಸೇವಾ ಕೇಂದ್ರದ ವಾಹನ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.ನೀರಮಾನ್ವಿ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರ
ಈ ಸಂದರ್ಭದಲ್ಲಿ ಸಿ.ಎಚ್.ಸಿ. ಯೋಜನಾಧಿಕಾರಿ ಮಂಜುನಾಥ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರವು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ತಾಂತ್ರಿಕ ನೆರವು ಹಾಗೂ ಗುಣಮಟ್ಟದ ಯಂತ್ರೋಪಕರಣಗಳ ಸೇವೆ ಒದಗಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಿಕವರಿ ಯೋಜನಾಧಿಕಾರಿ ಪಾತಲಿಂಗಪ್ಪ, ತಾಂತ್ರಿಕ ಅಭಿಯಂತರ ಸಂತೋಷ ಕುಮಾರ್, ಕೇಂದ್ರದ ಪ್ರಬಂಧಕ ಸಿದ್ದರಾಮಯ್ಯ, ತಾಲೂಕು ಕೃಷಿ ಮೇಲ್ವಿಚಾರಕ ಬಸವರಾಜ, ಪ್ರಗತಿಪರ ರೈತರಾದ ಉಮಾಪತಿ, ಅಯ್ಯಪ್ಪನಾಯಕ, ಹನುಮಂತರೆಡ್ಡಿ, ಮಾಲಿ ವಿರೂಪಾಕ್ಷಪ್ಪ ಗೌಡ, ಭೀಮರಾಯ್, ಶಿವರಾಮ್ ಗೌಡ, ಕುರಿ ಯಲ್ಲಪ್ಪ, ಸಣ್ಣರಾಜ ಹಾಗೂ ಗ್ರಾಮದ ಮುಖಂಡರಾದ ಶ್ರೀರಾಮುಲು, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.








