ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಸರಕಾರದ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ದೀಪಾವಳಿ ಪಾಡ್ಯದ ಅಂಗವಾಗಿ ನಡೆಯುವ ಕಿರು ಜಾತ್ರೆಗೆ ಗೋವಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಶಾಸಕ ಜಿ .ಹಂಪಯ್ಯ ನಾಯಕ್ ಚಾಲನೆ ನೀಡಿ ಮಾತನಾಡಿ ಶ್ರೀ ರೇಣುಕಾ ಯಲ್ಲಮ್ಮದೇವಿಯ ಕೃಪೆಯಿಂದ ನಾಡಿನಲ್ಲಿ ಸಮೃದ್ದವಾದ ಮಳೆ,ಬೆಳೆಯಾಗಿ ಸುಭಿಕ್ಷೆ ನೆಲಸಲ್ಲಿ ಎಂದು ತಿಳಿಸಿದರು.
ದೇವಸ್ಥಾನದಲ್ಲಿನ ಶ್ರೀ ರೇಣುಕಾ ಯಲ್ಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಅಧ್ಯಕ್ಷರಾದ ತಹಶೀಲ್ದಾರ್ ಭೀಮರಾಯ ಬಿ ರಾಮಸಮುದ್ರ, ಕಂದಾಯ ನಿರೀಕ್ಷಕರಾದ ಚರಣ್ ಸಿಂಗ್ ಠಾಕೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಾಫುರ್ ಸಾಬ್, ಬಿ.ಕೆ.ಅಮರೇಶಪ್ಪ ವಕೀಲರು, ಸಿದ್ದಲಿಂಗಪ್ಪ ವಕೀಲರು, ಗೋಪಾಲ್ ನಾಯಕ್ ನೀರಮಾನ್ವಿ, ಬೀರಪ್ಪ ಬಲ್ಲಟಗಿ, ಶರಣಬಸವ ನೀರಮಾನ್ವಿ, ರಸೂಲ್ ಕುರೇಶಿ, ಸತ್ತಾರ್ ಬಂಗ್ಲೆವಲೇ, ರಂಗನಾಥ್ ನಾಯಕ್, ಮಹಾಂತೇಶ ನಕ್ಕುಂದಿ,ಸೇರಿದಂತೆ ಇನ್ನಿತರರು ಇದ್ದರು.








