ಸಿರವಾರ: ತಾಲ್ಲೂಕಿನ ಚಿಂಚರಕಿ ಗ್ರಾಮದಲ್ಲಿ ನವೀಕೃತಗೊಂಡ ಪುರಾತನ ಶ್ರೀ ಮಾರಿಕಾಂಬಾ ದೇವಸ್ಥಾನದ ಲೋಕಾರ್ಪಣೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮಸ್ಥರ ಹಾಗೂ ಭಕ್ತಾದಿಗಳ ಪವಿತ್ರ ವಂತಿಗೆಯಿಂದ ನೂತನ ಕಳೆ ಪಡೆದಿರುವ ಈ ದೇವಾಲಯವನ್ನು ನವಲಕಲ್ ಬೃಹನ್ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ, ಉದ್ಘಾಟನೆ ನೇರವೇರಿಸಿದರು.
ಧಾರ್ಮಿಕ ವಿಧಿವಿಧಾನಗಳ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಸಂಗಯ್ಯಸ್ವಾಮಿ, ಕಿಡಿಗಣ್ಣಯ್ಯ ಸ್ವಾಮಿ, ಬಸವರಾಜಯ್ಯ ಸ್ವಾಮಿ, ಬಂಡೆಯ್ಯಸ್ವಾಮಿ, ಶರಣು ಸಾಹುಕಾರ, ಕಾಶೆಪ್ಪ ದೊಡ್ಡಮನಿ, ಮಲ್ಲು ಬಾರೀಕೇರ್, ಜಗದೀಶ ಹೂಗಾರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು, ಕರ್ಪೂರ ಬೆಳಗಿ ಭಕ್ತಿ ಸಮರ್ಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.








