ಮಾನ್ವಿ: ಪಟ್ಟಣದ ನೇತಾಜಿ ಪ್ರಕಾಶನದ ಮುಖ್ಯಸ್ಥರಾದ ಕೆ, ವಿಜಯಲಕ್ಷ್ಮೀ ಮಾತನಾಡಿ ನಮ್ಮ ನೇತಾಜಿ ಪ್ರಕಾಶನದ ವತಿಯಿಂದ ರಾಯಚೂರು ಜಿಲ್ಲೆಯ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೊಸಗನ್ನಡದ ಅರುಣೋದಯದಿಂದ ಮೊದಲ್ಗೊಂಡು ಜಾಗತೀಕರಣದ ಇಂದಿನ ಲೇಖಕರವರೆಗೆ ವಿವಿಧ ಪ್ರಕಾರದ ಸಾಹಿತ್ಯದ ಕೃಷಿಯನ್ನು ಕೈಗೊಂಡ ಬರಹಗಾರರ ಹಾಗೂ ಸಾಹಿತಿಗಳ,ವಿಮರ್ಶಕರನ್ನು ಪರಿಚಯಿಸುವ ಹಾಗೂ ಅವರ ಕುರಿತು ಹಾಗೂ ಸಾಹಿತ್ಯ ಕೃತಿಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡ ಪರಿಚಯ ಪುಸ್ತಕವನ್ನು ಹೊರತರುವ ಉದ್ದೇಶದಿಂದ ರಾಯಚೂರು ಜಿಲ್ಲೆಯ ಹಾಗೂ ಜಿಲ್ಲೆಯಿಂದ ಹೊರಗೆ ಹೋಗಿ ವಾಸಮಾಡುತ್ತಿರುವ ಸಾಹಿತಿಗಳು. ಲೇಖಕರು, ಬರಹಗಾರರರು, ಕವಿಗಳು, ಸಾಹಿತಿಗಳು,ಚಿಂತಕರು,ಸಮಾಜಸೇವಕರು ಕನಿಷ್ಠ ಒಂದಾದರೂ ಪುಸ್ತಕವನ್ನು ಹೊರತಂದಿರುವವರು, ನಿಕಟವರ್ತಿಗಳು.ಕುಟುಂಬದವರು ಸ್ವತಃ ಲೇಖಕರರಾಗಿದ್ದರೆ ಇಲ್ಲವೇ ಗೊತ್ತಿರುವ ಸಾಹಿತಿಗಳ ಮಾಹಿತಿ ಇದ್ದಲ್ಲಿ ಅವರ ವಿವರ ಕಳಿಸಿಕೊಡಬಹುದು. ವೈಯುಕ್ತಿಕ ಪರಿಚಯ ಹಾಗೂ ತಮ್ಮ ಕೃತಿಗಳ ಸಂಪೂರ್ಣವಾದ ವಿವರಗಳುಳ್ಳ ಮಾಹಿತಿಯನ್ನು ನೇತಾಜಿ ಪ್ರಕಾಶನ ಕೆ.ಜಿ.ರಸ್ತೆ, ನೇತಾಜಿ ನಗರ ಮಾನ್ವಿ 584123.ಈ ವಿಳಾಸಕ್ಕೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಮೊ,ನಂ.9880706628 ಸಂಪರ್ಕಿಸಬಹುದು.

Previous articleಸಿಡಿಲಿಗೆ ಬಲಿಯಾದ ರೈತ ಪ್ರಭಣ್ಣ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಶಾಸಕ ಬಸವನಗೌಡ ದದ್ದಲ್
Next articleಪೋತ್ನಾಳ್ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ -2 ಕಾರ್ಯಕ್ರಮ