ರಾಯಚೂರು: ರಾಯಚೂರಿನಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಗಾನಸುಧೆ ಕಲಾ ಬಳಗ (ರಿ.) ರಾಯಚೂರು ಹಾಗೂ ಮಮದಾಪುರದ ಶ್ರೀ ಗದರ್ ಮಾರಿಕಾಂಬ ದೇವಸ್ಥಾನ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅ.12ರಂದು ಸಂಜೆ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಥಳೀಯ ಕಲಾವಿದರಿಂದ ‘ಹಾಸ್ಯ ಮೂರ್ಖ ದೊರೆ’ ನಾಟಕ ಪ್ರದರ್ಶನ ನಡೆಯಿತು.
ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ‘ಹಾಸ್ಯ ಮೂರ್ಖ ದೊರೆ’ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಗೊಂಡಿತು.
ಕಾರ್ಯಕ್ರಮದಲ್ಲಿ ಈರಣ್ಣ ಪೋಸ್ಟ್ಮ್ಯಾನ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಾರ್ಕ, ಅಯ್ಯಪ್ಪ ನೆಲಹಾಳ, ಶ್ರೀ ಗದರ್ ಮಾರಿಕಾಂಬ ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ಸುಗ್ರೀವ, ಬಸವರೆಡ್ಡಿ ಯಾದವ್, ಭೋಜರಾಜ ಹಾಗೂ ಗಾನಸುಧೆ ಕಲಾ ಬಳಗದ (ರಿ.) ರಾಯಚೂರು ಉಪಾಧ್ಯಕ್ಷ ಶಿವರಾಜ್ ಸೇರಿದಂತೆ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.








