ನವದೆಹಲಿ: ‘Students’ Laptop Scheme 2026’ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಹೇಳಿ ಲಿಂಕ್‌ವೊಂದನ್ನು ಹಂಚಿಕೊಳ್ಳಲಾಗುತ್ತಿರುವ ವಾಟ್ಸ್‌ಆ್ಯಪ್ ಸಂದೇಶದ ಬಗ್ಗೆ PIB Fact Check ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳು ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸಂದೇಶದಲ್ಲಿ ಸೂಚಿಸಲಾಗುತ್ತಿದೆ. ಆದರೆ ಈ ಸಂದೇಶ ನಕಲಿ ಹಾಗೂ ವಂಚನಾತ್ಮಕವಾಗಿದ್ದು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಹರಡಲಾಗುತ್ತಿದೆ ಎಂದು PIB Fact Check ಸ್ಪಷ್ಟಪಡಿಸಿದೆ.
ಇಂತಹ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಹಾಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಉಚಿತ ಲ್ಯಾಪ್‌ಟಾಪ್, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ನೀಡುವುದಾಗಿ ಹೇಳಿ ಅಪರಿಚಿತ ಸಂದೇಶಗಳು ಬಂದರೆ ಎಚ್ಚರಿಕೆ ವಹಿಸಬೇಕು. ಯಾವುದೇ ಯೋಜನೆ ಅಥವಾ ಸರ್ಕಾರಿ ಘೋಷಣೆಯ ನೈಜತೆಯನ್ನು ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳ ಮೂಲಕ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು PIB Fact Check ಸಲಹೆ ನೀಡಿದೆ.
ವಿದ್ಯಾರ್ಥಿಗಳು ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಆಧಾರ್, ಬ್ಯಾಂಕ್ ವಿವರ, OTP ಸೇರಿದಂತೆ ಯಾವುದೇ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ನಮೂದಿಸದಂತೆ ಎಚ್ಚರಿಕೆ ವಹಿಸಬೇಕು.

Previous articleಮುಚ್ಚಳಗುಡ್ಡ ಕ್ಯಾಂಪಿನಲ್ಲಿ ಮರಡಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಸಂಭ್ರಮ
Next articleಸುರಕ್ಷತೆ ಮತ್ತು ಸುಖಕರ ಪ್ರಯಾಣಕ್ಕೆ ಟೊಯೋಟಾ ವಾಹನಗಳು ಸಹಕಾರಿ: ಗಿರಿಜಾ ಶಂಕರ್