ಸಿರವಾರ: ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ED ದಾಳಿ ನಡೆಸಿದೆ ಎಂದು ಆರೋಪಿಸಿ, ಭಾನುವಾರ ಸಂಜೆ ಸಿರವಾರ ಪಟ್ಟಣದಲ್ಲಿ ಜಾರಕಿಹೊಳಿ ಅಭಿಮಾನಿಗಳು,ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜು ಹಿಡಿದು ಸಾಗಿದ ಪ್ರತಿಭಟನಾಕಾರರು, ಬಿಜೆಪಿ ಸರ್ಕಾರದ ವಿರುದ್ಧ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಸತೀಶ್ ಜಾರಕಿಹೊಳಿ ಅವರಂತಹ ಅಹಿಂದ ನಾಯಕನನ್ನು ಹತ್ತಿಕ್ಕುವ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ ಎಂದು ಎಚ್ಚರಿಸಿದರು.
ಈ ಪಂಜಿನ ರ್ಯಾಲಿಯಲ್ಲಿ ಬಸವರಾಜ ದಳಪತಿ, ಅಮರೇಶ ಮುರ್ಕಿಗುಡ್ಡ, ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಮೆಶಾಕ್ ದೊಡ್ಮನಿ ಶಂಕ್ರಣ್ಣ, ಶಿವರಾಜ, ರಂಗನಾಥ ಜಾಲಾಪುರ, ಗೋಪಿ ಹೊಸಮನೆ, ಜೈರಾಜ್, ನಾಗರಾಜ, ಗುರು, ಬಸವ, ರಮೇಶ, ರವಿ ಮಲ್ಲಟ, ಹನಮಂತ ದೋಣಮರಡಿ, ಸಾಬಣ್ಣ ಹುಣಿಚೆಡ , ನಾಗರಾಜ ಗೊಲದಿನ್ನಿ, ಹನಮಂತ, ರಾಜಪ್ಪ ಪಟಕನದೊಡ್ಡಿ, ಉಮರ್, ಮಂಜ ಮರಾಟ, ದೇವು, ಅಮರೇಶ ನುಗಡೋಣಿ, ಮಲ್ಲಿಕಾರ್ಜುನ, ಅಕ್ಬರ್, ಸಾಬಣ್ಣ, ರಹೀಮ, ಮನ್ಸೂರ, ನಾಸಿರ, ಉಪ್ಪಿ, ಮಾರ್ಕ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.








