ಸಿರವಾರ : ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಸಂಭ್ರಮ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಹಸೀಲ್ದಾರ್ ಅಶೋಕ ಪವಾರ ಮಾತನಾಡಿ,
ಕೆಲಸದ ಒತ್ತಡದ ನಿವಾರಣೆ ಗಾಗಿ ಅಧ್ಯಾತ್ಮ ದತ್ತ ಒಲವನ್ನು ತೋರಿಸಬೇಕು. ಪ್ರತಿಯೊಂದು ಹಂತದಲ್ಲೂ ನೆಮ್ಮದಿ, ಶಾಂತಿಗಾಗಿ ದಾರಿ ತೆರೆಯುತ್ತದೆ, ಕೆಲಸದ ಒತ್ತಡದ ಮಧ್ಯೆ ಬಿಡುವು ಮಾಡಿಕೊಂಡು ಆಶ್ರಮಕ್ಕೆ ಬರುವೆ ಎಂದು ತಹಸೀಲ್ದಾರ್ ಅಶೋಕ ಪವಾರ ಹೇಳಿದರು.
ಗಣ್ಯರಾದ ಜೆ ಶರಣಪ್ಪ ಗೌಡ, ಚುಕ್ಕಿ ಸೂಗಪ್ಪ ಸಾಹುಕಾರ ಮಾತನಾಡಿದರು.
ಪುಟ್ಟ ಮಕ್ಕಳಿಗೆ ಆಕರ್ಷಕವಾಗಿ ಕೃಷ್ಣ, ರಾಧೆ ಯವರ ವೇಷ ಭೂಷಣ ಗಳನ್ನು ಹಾಕಲಾಗಿತ್ತು.
ಇದೇ ಸಂದರ್ಭದಲ್ಲಿ ‘ರಕ್ಷಾ ಬಂಧನ’ ಹಬ್ಬದ ಅಂಗವಾಗಿ ನೆರೆದಿದ್ದ ಗಣ್ಯರಿಗೆ ಮತ್ತು ಮಾಧ್ಯಮದವರಿಗೆ ‘ರಕ್ಷೆ’ ಕಟ್ಟಲಾಯಿತು.
ಈ ವೇಳೆ ಬ್ರಹ್ಮಕುಮಾರಿ ಆಶ್ರಮದ ರಾಜಯೋಗಿನಿ ಜ್ಯೋತಿ ಅಕ್ಕ, ಅರಿಕೇರಿ ಮಲ್ಲಪ್ಪ ಸಾಹುಕಾರ, ಪಿ ಶ್ರೀನಿವಾಸ್, ಗಲಗಿನ ಶಿವಲಿಂಗಯ್ಯ,ಮಲ್ಲಿಕಾರ್ಜುನ ಮಹೇಂದ್ರಕರ್ ಸೇರಿದಂತೆ ಅಧ್ಯಾತ್ಮ ಸಾಧಕರು, ಮಹಿಳೆಯರು ಇದ್ದರು.








