ಮಾನ್ವಿ: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಮಾನ್ವಿ ಮಂಡಲದ ವತಿಯಿಂದ ವಿಜಯೋತ್ಸವ ಆಚರಿಸಿ ಸಂಭ್ರಮಿಸಲಾಯಿತು.

ಚುನಾವಣೆಯಲ್ಲಿ ಶಶೀಲ್ ಜಿ. ನಮೋಶಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಸವ ವೃತ್ತದಲ್ಲಿ ಒಂದೆಡೆ ಸೇರಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪರವಾಗಿ ಸಂಭ್ರಮಾಚರಣೆ ನಡೆಸಿ, ಅಭ್ಯರ್ಥಿಯ ಗೆಲುವನ್ನು ಸಂಭ್ರಮದಿಂದ ಸ್ವಾಗತಿಸಿದರು.

ಬಿಜೆಪಿ ಮಾನ್ವಿ ಮಂಡಲದ ಅಧ್ಯಕ್ಷ ವೀರಭದ್ರಗೌಡ ಭೋಗಾವತಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು, ಮಾಜಿ ಮಂಡಲ ಅಧ್ಯಕ್ಷ ಜೆ. ಸುಧಾಕರ್, ಮುಖಂಡರಾದ ವೀರನಗೌಡ ವಕೀಲರು, ಶ್ರೀಧರ ಸ್ವಾಮಿ, ಜಗದೀಶ್ ವತ್ತೂರ್, ರಾಯಪ್ಪ ವಕೀಲರು, ಶಿವಲಿಂಗಯ್ಯ ಸ್ವಾಮಿ, ಚಂದ್ರಶೇಖರ ನಾಯಕ, ರವಿಕುಮಾರ ಆಲ್ದಾಳ, ಕುಮಾರಸ್ವಾಮಿ ಮೇದಾರ, ಬಸನಗೌಡ ಕರಡಿಗುಡ್ಡ, ವಿರೂಪಾಕ್ಷಿಗೌಡ ನುಡೋಣಿ, ಗೋಪಾಲ ಇಬ್ರಾಂಪುರ, ಕೆ. ವೆಂಕಟೇಶ, ಈರಣ್ಣ ನಾಯಕ, ಸುನೀಲ್ ಸ್ವಾಮಿ, ವಿಜಯಕುಮಾರ್ ಮೇಟಿ, ರಾಜೇಂದ್ರ ವಟಗಲ್, ಭಾಸ್ಕರ್ ಜಗಲಿ, ಬಸವರಾಜ ಗುತ್ತೇದಾರ, ಜಗದೀಶ ಕುರ್ಡಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Previous articleಹಾಡುಹಗಲೇ ವ್ಯಾಪಾರಸ್ಥನ ಕೊಲೆ: ಅಸುರಕ್ಷಿತ ವಾತಾವರಣದ ವಿರುದ್ಧ ಮೂರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
Next articleಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿಗೆ ಗೆಲುವು