ರಾಯಚೂರು: ನಗರದ ರೇಸ್ ಚಾಣಕ್ಯ ಜೆನ್ ನೆಕ್ಸ್ ಶಾಲೆಯ ಟೇಬಲ್ ಟೆನ್ನಿಸ್ ಆಟಗಾರ ಕಾಕುಮನಿ ನೀಲಕಂಠ ವಿವೇಕಾನಂದ ಅವರು ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ತೃತೀಯ ಬಹುಮಾನ ಪಡೆದು ರಾಯಚೂರು ನಗರಕ್ಕೆ ಕೀರ್ತಿ ತಂದಿದ್ದಾರೆ.
ಸೆಪ್ಟೆಂಬರ್ 6ರಂದು ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನ್ನು ಬಳ್ಳಾರಿ ಸ್ಟೇಡಿಯಂ ಆಟಗಾರರು ಆಯೋಜಿಸಿದ್ದರು. ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಕುಮನಿ ನೀಲಕಂಠ ವಿವೇಕಾನಂದ ಅವರು ತೃತೀಯ ಬಹುಮಾನ ಪಡೆದುಕೊಂಡರು.
ರಾಯಚೂರು ನಗರಕ್ಕೆ ಕೀರ್ತಿ ತಂದಿರುವ ಆಟಗಾರನ ಸಾಧನೆಗೆ ರಾಯಚೂರು ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಉಪಾಧ್ಯಕ್ಷ ನಂದಾಪುರ ಶ್ರೀನಿವಾಸ, ಕಾರ್ಯದರ್ಶಿ ಯು. ಲಕ್ಷ್ಮೀ ನಾರಾಯಣ ಕೇಕುಡ ಹಾಗೂ ಟೇಬಲ್ ಟೆನ್ನಿಸ್ ತರಬೇತಿದಾರ ಮಂಚಾಲ ವೀರಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

Previous articleಶ್ರಾವಣದ ಕೊನೆಯ ಸೋಮವಾರ: ದೇವಸುಗೂರಿನ ಶ್ರೀ ಸುಗೂರೇಶ್ವರ ದೇವಸ್ಥಾನಕ್ಕೆ ಶಾಸಕ ಬಸನಗೌಡ ದದ್ದಲ್ ಭೇಟಿ
Next articleಸೆ. 17ರ ದ್ವಿವಿದ ಆಚರಣೆಗೆ ಸಿರವಾರ ತಾಲೂಕು ಆಡಳಿತ ಸಜ್ಜು: ಕಲ್ಯಾಣ ಕರ್ನಾಟಕ ಉತ್ಸವ, ವಿಶ್ವಕರ್ಮ ಜಯಂತಿಗೆ ಸಭೆ