ಸಿರವಾರ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನವಲಕಲ್ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ಪಿಯು ಸೈನ್ಸ್ ಕಾಲೇಜ್ ತಂಡಗಳು ಭರ್ಜರಿ ಸಾಧನೆ ಮಾಡಿವೆ.
ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ, ರೇಣುಕಾದೇವಿ, ಉಪನ್ಯಾಸಕಿಯರಾದ ಚಂದ್ರಮತಿ, ಪದ್ಮಾ ನಂದರೆಡ್ಡಿ, ಶಿವಗಂಗಾ, ವಿಜಯಲಕ್ಷ್ಮಿ, ಚಾಮುಂಡಿ, ಹಾಗು ಪ್ರವೀಣ್ ಸೇರಿದಂತೆ ಶಿಕ್ಷಕ ವೃಂದ, ವಾರ್ಡನ್ ಹಾಗೂ ಎಫ್‌ಡಿಎ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.








