ವಿಶೇಷ ವರದಿ

‘ಪ್ರೇರಣಾ’ – ವಿ. ಎಸ್. ಕಾಂತನವರ ಹಿಂದಿ ಕಾವ್ಯ ಸುಮಗುಚ್ಛ

ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು

ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಛಂದೋಬದ್ಧ ಪದ್ಯಗಳನ್ನು ಸೃಜಿಸಿರುವ ಶಬ್ದ ಗಾರುಡಿಗ. ರಾಯಚೂರಿನ ಟ್ಯಾಗೋರ್ ಸ್ಮಾರಕ ಬಾಲಕರ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಾಂತನವರ ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದಿಗೂ ತಮ್ಮ ನೆಚ್ಚಿನ ಗುರುಗಳು ಪಂಡಿತಜೀ ಎಂದು ನೆನಪಿಸಿಕೊಳ್ಳುತ್ತಾರೆ.

ಕಾಂತನವರ ಹಿಂದಿ ಭಾಷಾ ಪ್ರೇಮ ತರಗತಿಯಿಂದ ಆಚೆಗೂ ಹರಡಿಕೊಂಡಿತ್ತು. ಹಲವು ದಶಕಗಳ ಕಾಲ ಹಿಂದಿ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಹಿಂದಿ ಭಾಷೆಯ ಪ್ರಚಾರ ಕಾರ್ಯ ಮಾಡಿದ್ದಲ್ಲದೆ ಆ ಪರೀಕ್ಷೆಗಳ ಸಹಾಯದಿಂದ ನೂರಾರು ಜನ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಕಾಂತನವರು ಹಿಂದಿ ಪ್ರೇಮಿ ಮಂಡಲ, ಹಿಂದಿ ಸಮನ್ವಯ ಸಮಿತಿ ಗಳಂತಹ ಸಂಸ್ಥೆಗಳನ್ನು ಹುಟ್ಟುಹಾಕಿ, ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿರುತ್ತಾರೆ. ಸ್ವತಃ ಲೇಖಕರಾಗಿದ್ದರಿಂದ ಆನೇಕ ಲೇಖನಗಳನ್ನು ಕವನಗಳನ್ನು ರಚಿಸಿರುತ್ತಾರೆ.

ವಿ. ಎಸ್. ಕಾಂತನವರ ‘ಪ್ರೇರಣಾ’ ಹಿಂದಿ ಕವನ ಸಂಕಲನವು 1977 ರಲ್ಲಿ ರವೀಂದ್ರ ಪ್ರಕಾಶನ ದಿಂದ ಪ್ರಕಟಗೊಂಡಿತು. 2005ರಲ್ಲಿ ಮರು ಮುದ್ರಣ ಮಾಡಲಾಯಿತು. ಶೀರ್ಷಿಕೆ ಪದ್ಯವಾದ ‘ಪ್ರೇರಣಾ’ ಕವಿತೆಯು

ಇದನ್ನೂ ಓದಿ: ರಾಯಚೂರು ನ್ಯಾಯಾಲಯದಲ್ಲಿ ಗಾಂಧೀಜಿ ಜಯಂತಿ ಆಚರಣೆ

ಪ್ರೇರಣಾ ಕೆ ಫೂಲ್ ಸುಂದರ
ಹಾರ ಮೆ ಗೂಂಥಾ ಹುವಾ
ನೀಲ ಅಂಬುಜ ಸದೃಶ ಮಾಧವ
ಪೂಜನ ಮೈ ಚಲ್ ಪಡಾ ||
ಪ್ರೇರಣೆಯೆಂಬುವ ಹೂಗಳ ಸುಂದರ ಮಾಲೆಯಿಂದ ನೀಲ ವರ್ಣದ ಮಾಧವನ ಪೂಜಿಸಲು ಹೊರಟಿರುವೆ ಎಂದು ಹೇಳುತ್ತಾ ಪ್ರೇರಣೆ ಎಲ್ಲೆಲ್ಲಿಂದ ಸಿಗುತ್ತದೆ ಎಂಬುದನ್ನು ವರ್ಣಿಸುತ್ತಾ ಹೋಗುತ್ತಾರೆ. ಸೂರ್ಯ ಚಂದ್ರ ನಕ್ಷತ್ರಗಳಿಂದ , ಎಲೆ ಹೂ ಬಳ್ಳಿಗಳಿಂದ, ಸಾಧು ಸಂತ ಮಹಂತರ ಅಮರ ವಾಣಿಯಿಂದ, ಯಂತ್ರ ಯುಗದ ಸಾಧಕರಿಂದ ಅಷ್ಟೇ ಅಲ್ಲ ರಾಜನೀತಿಯ ತಂತ್ರಗಳಿಂದಲೂ ಪ್ರೇರಣೆ ಸಿಗುತ್ತದೆ ಎಂದಿದ್ದಾರೆ. ಹೀಗೆ ವರ್ಣಿಸುತ್ತಾ ಕೊನೆಯ ನುಡಿಯಲ್ಲಿ ವಿಶ್ವದೆಲ್ಲೆಡೆ ಅರಳಿಕೊಂಡಿವೆ ಪ್ರೇರಣೆಯ ಹೂಗಳು ಒಂದು ವೇಳೆ ನೀನು ಅವುಗಳನ್ನು ಆಯ್ದುಕೊಳ್ಳದಿದ್ದರೆ ಕಾಲವು ನಿನ್ನನ್ನು ನೋಡಿ ಹಾಸ್ಯ ಮಾಡುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

‘ವೀರ ಭಾರತ’ ಕವಿತೆಯಲ್ಲಿ ಭಾರತೀಯರ ಶೌರ್ಯ ಪರಾಕ್ರಮಗಳನ್ನು ಬಿಂಬಿಸಿದ್ದಾರೆ. ಭಾರತದ ಪ್ರತಿಯೊಂದು ಮೈದಾನವು ಕುರುಕ್ಷೇತ್ರಕ್ಕೆ ಸಮಾನ. ಛತ್ರಪತಿ ಶಿವಾಜಿಯ ದಿಟ್ಟತನ, ರಾಣಾ ಪ್ರತಾಪರ ಹಲ್ದಿಘಾಟಿಯ ಹೋರಾಟ, ದುಷ್ಯಂತನ ಮಗ ಭರತ ಚಕ್ರವರ್ತಿಯ ಯುದ್ಧ ವೈಖರಿ ಮುಂತಾದ ವೀರೋಚಿತ ಅಂಶಗಳನ್ನು ಉಲ್ಲೇಖಿಸುತ್ತಾ ಭಾರತದ ಪ್ರತಿಯೊಬ್ಬ ನಾರಿಯು ದುರ್ಗೆಯ ಅವತಾರ ಎಂದಿದ್ದಾರೆ. ದೇಶ ಧರ್ಮದ ವೀರ ತೇಜದ ಶಕ್ತಿ ದೇವತೆಗೆ ಜಯಕಾರ ಹಾಕಿದ್ದಾರೆ. ‘ಭಾರತ ವೀರ’ ಕವಿತೆಯಲ್ಲಿ ನಮ್ಮ ಸೈನಿಕರ ಶಕ್ತಿಯ ಪರಾಕಾಷ್ಠೆಯನ್ನು ಪರಿಚಯಿಸಿದ್ದಾರೆ. ‘ಮಿಲನ’ ಕವಿತೆಯಲ್ಲಿ ಪ್ರಕೃತಿಯ ವಿವಿಧ ತತ್ವಗಳಲ್ಲಿ ಮಿಲನದ ಸ್ವರೂಪವನ್ನು ಕಂಡಿದ್ದಾರೆ. ನವಿರಾದ ಭಾವಗಳನ್ನು ಮಾತ್ರವಲ್ಲ ‘ಮಾನವ ಮನ’ ಕವಿತೆಯಲ್ಲಿ ಸಮಾಜದಲ್ಲಿ ಕಾಣುವ ಮಾನವನ ಕರಾಳ ಮುಖದ ಪರಿಚಯ ಮಾಡಿಸಿದ್ದಾರೆ. ‘ಗಾಂಧಿ ಸುಪ್ರಭಾತ’ ಕವಿತೆಯಲ್ಲಿ ಮಹಾತ್ಮ ಗಾಂಧಿ ಯವರಿಗೆ ‘ಹಿಂಸಾರಿ ಸತ್ಯಮೂರ್ತಿ ತವ ಸುಪ್ರಭಾತಂ’ ಎಂದಿದ್ದಾರೆ. ‘ಕವೀಂದ್ರ ರವೀಂದ್ರ’ ಕವಿತೆಯಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ ಕಾವ್ಯೋದ್ಯಾನದ ಚಂದನವಾಗಿದೆ ಎಂದು ಬಣ್ಣಿಸಿದ್ದಾರೆ. ‘ಪ್ರೇಮಚಂದ’ ಕವಿತೆಯಲ್ಲಿ ಅವರ ಕಾಲದ ಪರಿಸ್ಥಿತಿಗಳು ಹಾಗೂ ಅವರ ಸಾಹಿತ್ಯಕ್ಕೆ ಇದ್ದ ಶಕ್ತಿಯನ್ನು ಉದ್ಗರಿಸಿದ್ದಾರೆ.

ಕಾಂತನವರ

ದ್ವಾಪರ ಕಾ ಜ್ಞಾನ ಭಂಡಾರ ಯಹ ಕಲಿಯುಗ ಮೆ
ಸೋಪಾನ ಬನಗಯಾ ಮುಕ್ತಿ ಪಥ ಕೊ ||
ಎಂದು ಆರಂಭವಾಗುವ ‘ಭಗವದ್ಗೀತಾ‘ ಕವಿತೆಯಲ್ಲಿ ಕೃಷ್ಣನ ಗೀತೋಪದೇಶದ ಪ್ರಸಂಗದ ವರ್ಣನೆ ಇದೆ. ‘ಸ್ಮರಣ’ ಕವಿತೆಯಲ್ಲಿ ಪೌರಾಣಿಕವಾಗಿ, ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶೇಷ ಸಾಧನೆ ಮಾಡುವಲ್ಲಿ ಗುರುತಿಸಿಕೊಂಡ ನಾರಿಯರ ಅಂದರೆ ಸ್ತ್ರೀಶಕ್ತಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸೀತೆ, ರಾಧೆ, ಪಾರ್ವತಿ, ಲಕ್ಷ್ಮಿಯರಿಂದ ಮೊದಲುಗೊಂಡು ಗಾರ್ಗಿ ಮೈತ್ರೆಯಿ, ಸುಲಭಾ, ಸಾವಿತ್ರಿ, ಕಾತ್ಯಾಯಿನಿ ಸೇರಿದಂತೆ ಅಕ್ಕಮಹಾದೇವಿ, ರಾಣಿ ಚೆನ್ನಮ್ಮ, ರತ್ನಾವಳಿ, ಪನ್ನಾ ಧಾಯಿ, ದುರ್ಗಾವತಿ, ಕಸ್ತೂರಬಾ ಗಾಂಧಿ ವರೆಗೆ ಎಲ್ಲರನ್ನು ಸ್ಮರಿಸಿದ್ದಾರೆ.

 ಸೆಪ್ಟೆಂಬರ್ 14, 1949 ರಂದು, ಭಾರತದ ಸಂವಿಧಾನ ಸಭೆಯು ದೇವನಾಗರಿ ಲಿಪಿಯಲ್ಲಿ ಬರೆಯಲಾದ ಹಿಂದಿಯನ್ನು ಭಾರತದ ಗಣರಾಜ್ಯದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿತು. ಹೀಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸವನ್ನು ಆಚರಿಸಲಾಗುತ್ತದೆ.  ಈ ಶುಭ ಸಂದರ್ಭದಲ್ಲಿ ಕಾಂತನವರ ಪ್ರೇರಣಾ ಕವನ ಸಂಕಲನ ಓದುಗರಿಗೆ ಭಾಷಾಭಿಮಾನದ ಜೊತೆಗೆ ಭಾರತೀಯ ಪರಂಪರೆಯ ದರ್ಶನ ಮಾಡಿಸುತ್ತದೆ, ರಾಷ್ಟ್ರಪ್ರೇಮ, ಸಾಹಿತ್ಯ ಪ್ರೇಮಗಳನ್ನು ಹೆಚ್ಚಿಸುತ್ತದೆ. ಅವರ ಭೌತಿಕ ಅನುಪಸ್ಥಿತಿಯ ಈ ಬಾರಿಯ ಹಿಂದಿ ದಿವಸ ‘ಪ್ರೇರಣಾ’ ಮೂಲಕ ಹೊಸ ಪ್ರೇರಣೆಯನ್ನು ನೀಡುತ್ತಲಿದೆ. ಅವರದ್ದೇ ಆಶಯವನ್ನು ಉಲ್ಲೇಖಿಸುತ್ತಾ ಲೇಖನಕ್ಕೆ ವಿರಾಮ ನೀಡುವೆ. ಎಲ್ಲರಿಗೂ ಹಿಂದಿ ದಿವಸದ ಶುಭಾಶಯಗಳು.

‘ಏಕ ಹೃದಯ ಹೋ ಭಾರತ ಜನನಿ’

ಕಾಂತನವರ ಕಾವ್ಯದಲ್ಲಿ ಭಾಷೆ ಕೇವಲ ಅಭಿವ್ಯಕ್ತಿಯ ಮಾಧ್ಯಮವಾಗಿರದೆ, ಮೌಲ್ಯಗಳನ್ನು ಸಾರುವ ಸಾಧನವಾಗಿಯೂ ಕಾಣಿಸುತ್ತದೆ. ಅವರ ಕವಿತೆಗಳಲ್ಲಿ ಭಾರತೀಯ ಸಂಸ್ಕೃತಿ, ಪುರಾಣ, ಇತಿಹಾಸ ಹಾಗೂ ಸಮಕಾಲೀನ ಬದುಕಿನ ವಿವಿಧ ಆಯಾಮಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಸರಳವಾದ ಪದಗಳ ಮೂಲಕ ಗಂಭೀರವಾದ ವಿಚಾರಗಳನ್ನು ಓದುಗರಿಗೆ ತಲುಪಿಸುವುದು ಅವರ ಕಾವ್ಯದ ವಿಶೇಷತೆ. ಓದುಗರಲ್ಲಿ ಚಿಂತನೆ ಮೂಡಿಸುವುದರ ಜತೆಗೆ, ಬದುಕಿನ ಬಗ್ಗೆ ಆಶಾವಾದ ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳೆಸುವ ಆಶಯವೂ ಅವರ ಕಾವ್ಯದಲ್ಲಿ ಕಂಡುಬರುತ್ತದೆ.

ಹಿಂದಿ ಭಾಷೆಯನ್ನು ಅವರು ಕೇವಲ ಒಂದು ಭಾಷೆಯಾಗಿ ನೋಡದೆ, ದೇಶದ ವಿವಿಧ ಭಾಗಗಳ ಜನರನ್ನು ಬೆಸೆಯುವ ಸಂಪರ್ಕ ಭಾಷೆಯಾಗಿ ಕಂಡಿದ್ದರು. ಆದ್ದರಿಂದಲೇ ಹಿಂದಿಯ ಕಲಿಕೆ ಮತ್ತು ಪ್ರಚಾರಕ್ಕಾಗಿ ತಮ್ಮ ಶಿಕ್ಷಕ ವೃತ್ತಿಯ ಅವಧಿಯಲ್ಲೂ, ನಿವೃತ್ತಿಯ ನಂತರವೂ ನಿರಂತರವಾಗಿ ಕಾರ್ಯನಿರ್ವಹಿಸಿದರು. ಭಾಷೆಯ ಮೇಲಿನ ಅವರ ಅಭಿಮಾನವು ವೈಯಕ್ತಿಕ ಆಸಕ್ತಿಗೆ ಸೀಮಿತವಾಗದೆ, ಸಾಮಾಜಿಕ ಚಟುವಟಿಕೆಯ ರೂಪ ಪಡೆದುಕೊಂಡಿತ್ತು.

‘ಪ್ರೇರಣಾ’ ಸಂಕಲನವನ್ನು ಗಮನಿಸಿದಾಗ ಕಾಂತನವರ ಸಾಹಿತ್ಯದ ಮತ್ತೊಂದು ವೈಶಿಷ್ಟ್ಯ ಗೋಚರಿಸುತ್ತದೆ. ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದರ ಜತೆಗೆ, ವರ್ತಮಾನ ಸಮಾಜದ ಸಮಸ್ಯೆಗಳತ್ತಲೂ ಅವರು ಗಮನ ಹರಿಸಿದ್ದಾರೆ. ಹೀಗಾಗಿ ಈ ಕವನಗಳು ಕೇವಲ ಒಂದು ಕಾಲಘಟ್ಟದ ಸಾಹಿತ್ಯವಾಗಿ ಉಳಿಯದೆ, ಇಂದಿನ ಓದುಗರಿಗೂ ಹಲವು ವಿಚಾರಗಳನ್ನು ಆಲೋಚಿಸುವಂತೆ ಮಾಡುತ್ತವೆ. ವಿಶೇಷವಾಗಿ ಯುವಜನತೆ ತಮ್ಮ ಇತಿಹಾಸ, ಸಂಸ್ಕೃತಿ ಮತ್ತು ದೇಶದ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂಬ ಸಂದೇಶ ಅವರ ಕಾವ್ಯದಲ್ಲಿ ಅಂತರ್ಗತವಾಗಿದೆ.

ಹಿಂದಿ ದಿವಸದ ಸಂದರ್ಭದಲ್ಲಿ ಇಂತಹ ಕೃತಿಗಳನ್ನು ಮತ್ತೊಮ್ಮೆ ಓದುವುದು ಎಂದರೆ ಕೇವಲ ಒಬ್ಬ ಕವಿಯನ್ನು ಸ್ಮರಿಸುವುದಲ್ಲ; ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಬದುಕನ್ನು ಮುಡಿಪಾಗಿಟ್ಟ ಹಿರಿಯರ ಸೇವೆಯನ್ನು ನೆನಪಿಸಿಕೊಳ್ಳುವುದೂ ಆಗಿದೆ. ‘ಪ್ರೇರಣಾ’ ಇಂದು ಕೂಡ ತನ್ನ ಹೆಸರಿನಂತೆ ಓದುಗರ ಮನದಲ್ಲಿ ಹೊಸ ಚಿಂತನೆ ಮತ್ತು ಸ್ಫೂರ್ತಿಯನ್ನು ಮೂಡಿಸುವ ಕಾವ್ಯಗುಚ್ಛವಾಗಿ ಉಳಿದಿದೆ. ಎಡೆದೊರೆ ನ್ಯೂಸ್

projectededore

Recent Posts

ಮಾದಕ ವ್ಯಸನ ನಿರ್ಮೂಲನೆ ಇಂದಿನ ಅಗತ್ಯ: ಸಿ.ವಿ. ಚಂದ್ರಶೇಖರ್

ಕೊಪ್ಪಳದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾದಕ ವ್ಯಸನ ನಿರ್ಮೂಲನೆ, ಯುವಜನರಲ್ಲಿ ಜಾಗೃತಿ ಮತ್ತು ಅಕ್ರಮ…

12 hours ago

ರಾಯಚೂರು ನ್ಯಾಯಾಲಯದಲ್ಲಿ ಗಾಂಧೀಜಿ ಜಯಂತಿ ಆಚರಣೆ

ರಾಯಚೂರು: ರಾಯಚೂರು ನ್ಯಾಯವಾದಿಗಳ ಸಂಘ ಹಾಗೂ ನ್ಯಾಯಾಂಗ ಇಲಾಖೆಯ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು.…

14 hours ago

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಆಯುಕ್ತೆ ಫೌಜಿಯಾ ತರನ್ನುಮ್

ರಾಯಚೂರು: ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿ ಕೈಗೊಂಡಿರುವ…

19 hours ago

ಕೃವಿವಿಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ…

20 hours ago

ಸ್ವಚ್ಛತೆ ಜೀವನದ ಅವಿಭಾಜ್ಯ ಅಂಗ: ಜಿ. ಮಲ್ಲಿಕಾರ್ಜುನ್

ರಾಯಚೂರು: ಸ್ವಚ್ಛತೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಬೇಕು. ಸುತ್ತಲಿನ ಪರಿಸರ ಶುಚಿತ್ವದಿಂದ ಕೂಡಿದ್ದರೆ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ…

21 hours ago

ಶಾಸಕ ಬಸನಗೌಡ ದದ್ದಲ್‌ರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…

3 weeks ago