ರಾಯಚೂರು

ನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್

ಮಾನ್ವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ನೇಗಿಲುಯೋಗಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದ್ದು. ಅದಕ್ಕಾಗಿ ರೈತರ ಹಾಗೂ ಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು. ಈ ಯೋಜನೆಯಡಿ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿರುವುದರಿಂದ ತಾಲೂಕಿನ ಟ್ರ‍್ಯಾಕ್ಟರ್, ಪವರ್ ಟಿಲ್ಲರ್, ಸ್ವಯಂಚಾಲಿತ ಭತ್ತ ನಾಟಿ ಯಂತ್ರ, ರೀಪರ್. ಕಂಬೈನ್ ಹಾರ್ವೆಸ್ಟರ್ ಹಾಗೂ ಇತರೆ ಕೃಷಿ ಯಂತ್ರೋಪಕರಣಗಳನ್ನು ಹೋಂದಿರುವ ಆಸಕ್ತ ರೈತರು ಮತ್ತು ಸೇವಾದಾರರು ತಮ್ಮ ಟ್ರ‍್ಯಾಕ್ಟರ್ ಆರ್.ಸಿ.ಪುಸ್ತಕ, ಟ್ರ‍್ಯಾಕ್ಟರ್ ಚಾಸಿ ಸಂಖ್ಯೆ , ರೈತನ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ರೈತರು ಹಾಗೂ ಕೃಷಿ ಯಂತ್ರೋಪಕರಣಗಳ ಮಾಲೀಕರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಸೇವಾದಾರರಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಗುರುನಾಥ ಭೂಸನೂರ್ ಪ್ರಕಟಣೆಯ ಮೂಲಕ ಕೋರಿದ್ದಾರೆ.

projectededore

Recent Posts

ಉತ್ತಾನ ದ್ವಾದಶಿ ಅಂಗವಾಗಿ ಮಂತ್ರಾಲಯ ಶ್ರೀಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವ| ವಿಡಿಯೋ..

ಮಂತ್ರಾಲಯ: ಉತ್ತಾನ ದ್ವಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವ ಮತ್ತು…

12 hours ago

ಶಿಕ್ಷಣವೇ ನಮ್ಮ ಶಕ್ತಿ, ಒಗ್ಗಟ್ಟೇ ನಮ್ಮ ಅಸ್ತ್ರ: ವಡ್ಡರ ಭೋವಿ ಸಮಾಜದ ಸಭೆಯಲ್ಲಿ ಕರೆ

ಸಿರವಾರ: "ನಮ್ಮ ಮಕ್ಕಳು ಓದಿನಿಂದ ದೂರವಾದರೆ, ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಶಿಕ್ಷಣ ಕೊಡಿಸುವುದೇ…

14 hours ago

ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರಿಗೂ ಸಮರ್ಪಕವಾಗಿ ನೀರು ಹರಿಸಿ: ಚಾಮರಸ ಮಾಲಿಪಾಟೀಲ್

ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ…

15 hours ago

ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶ

ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ…

2 days ago

ನೀರಾವರಿ ಇಲಾಖೆಯಿಂದ ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡಿ: ಎನ್. ಎಸ್. ಬೋಸುರಾಜು

ಮಾನ್ವಿ:  ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರು ಕೂಡ  ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡದೆ ಇರುವುದರಿಂದ ಮಾನ್ವಿ…

2 days ago

ರಾಯಚೂರಿನಲ್ಲಿ ಇನ್ಮುಂದೆ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ: ನ.23ರಿಂದ ಹೊಸ ವ್ಯವಸ್ಥೆ ಜಾರಿ

ರಾಯಚೂರು: ಎಲ್ ನಿನೋ ಹವಾಮಾನ ಪರಿಣಾಮದಿಂದ ಮಳೆಯ ಕೊರತೆ ಉಂಟಾಗಿ ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ…

2 days ago