ಸಿರವಾರ: “ನಮ್ಮ ಮಕ್ಕಳು ಓದಿನಿಂದ ದೂರವಾದರೆ, ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಶಿಕ್ಷಣ ಕೊಡಿಸುವುದೇ ಮೊದಲ ಆದ್ಯತೆ ಆಗಬೇಕು” ಎಂದು ಕರ್ನಾಟಕ ಭೋವಿ ಬಳಗ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷ ಹನುಮಂತ ಅನ್ವಾರ ಹೇಳಿದರು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಡ್ಡರ ಭೋವಿ ಸಮಾಜದ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ನಮ್ಮ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಓದು, ಉದ್ಯೋಗ, ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಮೀಸಲಾತಿ, ನಿರುದ್ಯೋಗದಂತಹ ಸಮಸ್ಯೆಗಳು ನಮ್ಮ ಮುಂದಿವೆ. ಅವುಗಳನ್ನು ಎದುರಿಸಲು ನಾವು ಸಂಘಟಿತರಾಗಲೇಬೇಕು” ಎಂದು ಅವರು ಒತ್ತಿ ಹೇಳಿದರು.
ಇದೇ ವೇಳೆ ಹೊರಗಿನಿಂದ ಬಂದು ಸಮಾಜದವರ ಮೇಲೆ ಅನ್ಯಾಯ ಮಾಡುತ್ತಿರುವ ಘಟನೆಗಳನ್ನು ಅವರು ತೀವ್ರವಾಗಿ ಖಂಡಿಸಿದರು. “ನಮ್ಮ ಕುಲಕಸುಬುಗಳನ್ನು ಬೇರೆ ಸಮುದಾಯದವರು ಮಾಡುತ್ತಿರುವುದರಿಂದ ನಮ್ಮ ಜನರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಸಮಾಜದ ಹಕ್ಕುಗಳ ರಕ್ಷಣೆ, ಯುವಕರಿಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಂಘಟನೆ ಮತ್ತಷ್ಟು ಬಲಿಷ್ಠವಾಗಬೇಕು. ಪ್ರತಿಯೊಬ್ಬರೂ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ರಮೇಶ ಚಿಕ್ಕೆ ಹೊಸರೂರು, ಪ್ರಧಾನ ಕಾರ್ಯದರ್ಶಿ ನಾಗೇಶ ಕಟ್ಟಿಮನಿ ಮುಸ್ಟೂರ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ತಿಮ್ಮದೇವಿ ಮುಸ್ಟೂರ್, ಜಿಲ್ಲಾ ಜಂಟಿ ಕಾರ್ಯದರ್ಶಿ ರೇಣುಕಾ ಸಿರವಾರ, ಖಜಾಂಚಿ ಹುಚ್ಚರಡ್ಡಿ ಸಿಂಧನೂರು, ಜಂಟಿ ಖಜಾಂಚಿ ಅನಿಲ್ ರಘುನಾಥ್ ಹಳ್ಳಿ, ದೇವದುರ್ಗ ತಾಲೂಕು ಪ್ರತಿನಿಧಿ ನಾಗರಾಜ ಜಾಲಹಳ್ಳಿ, ರಾಯಚೂರು ತಾಲೂಕು ಅಧ್ಯಕ್ಷ ವೀರೇಶ ಮನ್ಸಲಾಪುರ ಸೇರಿದಂತೆ ಸಮಾಜದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂತ್ರಾಲಯ: ಉತ್ತಾನ ದ್ವಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವ ಮತ್ತು…
ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ…
ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ…
ಮಾನ್ವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ನೇಗಿಲುಯೋಗಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ಸುಲಭವಾಗಿ ಮತ್ತು…
ಮಾನ್ವಿ: ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರು ಕೂಡ ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡದೆ ಇರುವುದರಿಂದ ಮಾನ್ವಿ…
ರಾಯಚೂರು: ಎಲ್ ನಿನೋ ಹವಾಮಾನ ಪರಿಣಾಮದಿಂದ ಮಳೆಯ ಕೊರತೆ ಉಂಟಾಗಿ ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ…