ಸಿರವಾರ: ಸಿರವಾರ ತಾಲೂಕನ್ನು ತೀವ್ರ ಬರಪೀಡಿತ ಎಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ವತಿಯಿಂದ ತಹಶೀಲ್ದಾರ್ ಅಶೋಕ ಪವಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಗೆ ಬರೆದ ಮನವಿ ಪತ್ರ ನೀಡಲಾಯಿತು.

  • ಪ್ರಮುಖ ಬೇಡಿಕೆಗಳು:
  • ಸಿರವಾರವನ್ನು ಬರಪೀಡಿತ ಎಂದು ಘೋಷಿಸಿ ತುರ್ತು ಪರಿಹಾರ ಕ್ರಮ ಜಾರಿ
  • ಕೆಳಭಾಗದ ರೈತರಿಗೆ ಕಾಲುವೆ ನೀರು ಹರಿಸುವುದು
  • ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ ₹50,000 ಪರಿಹಾರ ಹಾಗೂ ಸಂಪೂರ್ಣ ಸಾಲಮನ್ನಾ
  • ಬರ ಹಿನ್ನೆಲೆಯಲ್ಲಿ ವಿಬಿ ರಾಮ್ ಜಿ ಯೋಜನೆಯಡಿ 200 ಮಾನವ ದಿನಗಳಿಗೆ ಹೆಚ್ಚಳ
  • 5-6 ತಿಂಗಳಿಂದ ಸ್ಥಗಿತಗೊಂಡಿರುವ ಪಿಂಚಣಿ ತಕ್ಷಣ ಬಿಡುಗಡೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಕ ಹಾಗೂ ಪೋರ್ಟಲ್ ಸಮಸ್ಯೆ ಬಗೆಹರಿಸುವಿಕೆ

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸಗೂರು, ಜಿಲ್ಲಾ ಉಪಾಧ್ಯಕ್ಷ ದುರ್ಗಣ್ಣ ಅಡಕಲಗುಡ್ಡ, ತಾಲೂಕು ಕಾರ್ಯದರ್ಶಿ ಆದ್ಯಪ್ಪ ಕಲ್ಲೂರು, ತಾಲೂಕು ಉಪಾಧ್ಯಕ್ಷರಾದ ವೀರೇಶ ಜಕ್ಕಲದಿನ್ನಿ, ಹನುಮಯ್ಯ ಕಲ್ಲೂರು, ಸಿದ್ದರಾಮರೆಡ್ಡಿ ಜಕ್ಕಲದಿನ್ನಿ ಸೇರಿದಂತೆ ಇತರರು ಇದ್ದರು.

Previous articleಬಿಜೆಪಿ ಪಾದಯಾತ್ರೆ ಹತಾಶೆಯ ಸಂಕೇತ: ಸಚಿವ ಅಜಯ್ ಸಿಂಗ್
Next articleಕಬಡ್ಡಿಯಲ್ಲಿ ಸಿರವಾರ ಸರ್ಕಾರಿ ಪಿಯು ಕಾಲೇಜಿಗೆ ಪ್ರಥಮ: ಜಿಲ್ಲಾ ಮಟ್ಟಕ್ಕೆ ಆಯ್ಕೆ