ಸಿರವಾರ: ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗರಚನಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿರವಾರ ಪಟ್ಟಣದ ವಾಣಿಜ್ಯೋದ್ಯಮಿ ಗಲಗಿನ ಚಂದ್ರಶೇಖರಪ್ಪ ಅವರ ಸುಪುತ್ರ ಡಾ. ಶ್ರೀನಾಥ ಸಿ. ಗಲಗ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆ (IMA-KSB) ವತಿಯಿಂದ ‘IMA-KSB ಶಿಕ್ಷಕರ ದಿನಾಚರಣೆ ಪ್ರಶಸ್ತಿ–2026’ ನೀಡಿ ಗೌರವಿಸಲಾಗಿದೆ.
ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಜ್ಞಾನ, ಸಾಮರ್ಥ್ಯ, ಮೌಲ್ಯಗಳು ಹಾಗೂ ಉತ್ತಮ ಮನೋಭಾವ ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವ ಅವರ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಡಾ. ಶ್ರೀನಾಥ್ ಸಿ. ಗಲಗ ಅವರ ಶೈಕ್ಷಣಿಕ ಸೇವೆಯನ್ನು ಅಭಿನಂದಿಸಲಾಯಿತು.
“ಶಿಕ್ಷಣದ ಮೂಲಕ ಜ್ಞಾನವನ್ನು ಹಂಚಿ, ಭವಿಷ್ಯದ ವೈದ್ಯರನ್ನು ರೂಪಿಸುವ ಮಹತ್ತರ ಸೇವೆಗೆ ದೊರೆತ ಗೌರವ ಇದಾಗಿದೆ” ಎಂದು ಪ್ರಶಸ್ತಿಯ ಮಹತ್ವವನ್ನು ಬಣ್ಣಿಸಲಾಗಿದೆ.








