ಮಾನ್ವಿ: ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಸಮಯದಲ್ಲಿ ಸಿಡಿಲಿಗೆ ಬಲಿಯಾದ ರೈತ ಪ್ರಭಣ್ಣ ರವರ ನಿವಾಸಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿ ಸಂತ್ವನ ಹೇಳಿ ಸರಕಾರದಿಂದ 5 ಲಕ್ಷರು ಪರಿಹಾರದ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ವಿತರಿಸಿದರು.
ಸಿಡಿಲಿಗೆ ಗಾಯಗೊಂಡ ನಾಲ್ವರಿಗೂ ಕೂಡ ಬೇಗನೆ ಗುಣಮುಖರಾಗುವಂತೆ ಹಾರೈಸಿದರು.
ಈ ವೇಳೆ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ,ಕಂದಾಯ ನೀರೀಕ್ಷಕರಾದ ಹನುಮಂತಪ್ಪ ಜಲ್ಲಿ ಸೇರಿದಂತೆ ಮುಖಂಡರಾದ ಮೌನೇಶನಾಯಕ. ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಇದ್ದರು.








