ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ನಡೆದ ಮಣ್ಣಿನ ಸ್ನಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿಯ ಯೋಗ ಗುರು ಹಾಗೂ ಪ್ರಕೃತಿಚಿಕಿತ್ಸಕರಾದ ಮೌನೇಶ್ ಪೋತ್ನಾಳ್ ಮಾತನಾಡಿ ಯೋಗ ಮತ್ತು ಪ್ರಕೃತಿಚಿಕಿತ್ಸೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಪ್ರತಿ ಯೊಬ್ಬರು ಕೂಡ ಉತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಯುತವಾದ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ. ನಮ್ಮ ಪ್ರಾಚೀನ ಆರೋಗ್ಯ ಚಿಕಿತ್ಸ ಪದ್ದತಿಯಲ್ಲಿ ಪ್ರಕೃತಿಯಾಧಾರಿತವಾದ ಚಿಕಿತ್ಸಾ ಪದ್ಧತಿಗಳ ಮೂಲಕ ಪ್ರಕೃತಿಯೊಂದಿಗೆ ಬೆರೆತು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರು ಅದ್ದರಿಂದ ಇಂದಿನ ಪಿಳಿಗೆಗೆ ನಮ್ಮ ಪ್ರಾಚೀನ ಪದ್ದತಿಗಳನ್ನು ಪರಿಚಯಿಸುವ ಉದ್ದೇಶದಿಂದ ಯೋಗಾಭ್ಯಾಸದ ಜೊತೆಗೆ ಮಣ್ಣಿನ ಸ್ನಾನದ ಬಗ್ಗೆ ಶಿಭಿರಾರ್ಥಿಗಳಿಗೆ ಪ್ರಯೋಗಿಕವಾಗಿ ತಿಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಮಣ್ಣಿನ ಸ್ನಾನ ಶಿಬಿರದಲ್ಲಿ ನೂರಾರು ಜನರು ತಮ್ಮ ಮೈಗೆ ಮಣ್ಣನ್ನು ಹಚ್ಚಿಕೊಂಡು ಮಣ್ಣಿನ ಸ್ನಾನ ಮಾಡಿದರು
ಶಿಬಿರದಲ್ಲಿ ಡಾ. ರಾಜೇಂದ್ರ ಬೆನಕನಾಳ್, ಜಿ. ನಾಗರಾಜ್, ಲಿಂಗರಾಜ ಗಡಿಗಿ, ಮಹಾಂತೇಶ ಸ್ವಾಮಿ ರೌಡರ್, ಶ್ರೀಶೈಲ ಗೌಡರು, ಚಂದ್ರಮೌಳೇಶ್ವರ, ಚಂದ್ರಶೇಖರ್ ಚೀಕಲಪರ್ವಿ, ನಿವೃತ್ತ ಪಿ.ಎಸ್.ಐ.ವೀರನಗೌಡ, ನಾಗರಾಜ್ ಭಂಡಾರಿ, ಶ್ರೀನಿವಾಸ, ನೀಲಕಂಠಪ್ಪ, ಎಂ. ಪ್ರಿಯಂಬಕೇಶ, ರಾಮು, ರಾಮಕೃಷ್ಣ ರೆಡ್ಡಿ, ವೆಂಕಟೇಶ ಮದ್ಲಾಪುರ, ಸುರೇಶ ಕೊಟ್ನೆಕಲ್ , ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.
2-ಮಾನ್ವಿ-3:
ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ನಡೆದ ಮಣ್ಣಿನ ಸ್ನಾನದ ಶಿಬಿರದಲ್ಲಿ ಮಣ್ಣಿನ ಸ್ನಾನ ಮಾಡುತ್ತಿರುವ ಶಿಭಿರಾರ್ಥಿಗಳು.








