ಸಿರವಾರ: ನಮ್ಮ ಸಹಕಾರಿ ಸಂಘ ಉತ್ತಮ ಪ್ರಗತಿ ಸಾಧಿಸಿದ್ದು, 2025-26ನೇ ಸಾಲಿನಲ್ಲಿ ಷೇರುದಾರರಿಗೆ ಶೇ.16ರಷ್ಟು ಲಾಭಾಂಶ ನೀಡಲಾಗುವುದು ಎಂದು ಬಲ್ಲಟಗಿ ಶ್ರೀಗುರು ಶರಣಬಸವ ಪತ್ತಿನ ಸೌಹಾರ್ದ ಸಂಘದ ಅಧ್ಯಕ್ಷ ಎಸ್.ಆರ್. ಶರಬಣ್ಣ ಹೇಳಿದರು.

ತಾಲೂಕಿನ ಬಲ್ಲಟಗಿಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘವು ಈ ಸಾಲಿನಲ್ಲಿ ₹31.92 ಲಕ್ಷ ಲಾಭ ಗಳಿಸಿದ್ದು, ಒಟ್ಟು ₹57.85 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ. ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದರಿಂದ ಉತ್ತಮ ವ್ಯವಹಾರ ಸಾಧ್ಯವಾಗಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಾ. ಟಿ. ಶರಣಪ್ಪ, ನಿರ್ದೇಶಕರಾದ ಕೆ. ಶಿವಪ್ಪಗೌಡ, ಶರಣಬಸಪ್ಪ, ಮಲ್ಲಣ್ಣ ಸಾಹುಕಾರ, ಮುದ್ದಪ್ಪ ಸಾಹುಕಾರ ಸೇರಿದಂತೆ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Previous articleನವಲಕಲ್ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ
Next articleಕಬಡ್ಡಿ ಸ್ಪರ್ಧೆಯಲ್ಲಿ ಬಸವೇಶ್ವರ ಪಿಯು ಕಾಲೇಜಿನ ಭರ್ಜರಿ ಸಾಧನೆ