ರಾಯಚೂರು

ಸೆ.7ಕ್ಕೆ ಯರಮರಸನ ಗುಡ್ಡದ ಬಸವೇಶ್ವರ ಜಾತ್ರಾ ಮಹೋತ್ಸವ

ಸಿರವಾರ: ಸಮೀಪದ ಯರಮರಸ್ ಗ್ರಾಮದ ಆರಾಧ್ಯ ದೈವ ಶ್ರೀ ಗುಡ್ಡದ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೆ.7ರ ಸೋಮವಾರ ಜರುಗಲಿದೆ ಎಂದು ದೇವಸ್ಥಾನದ ಅರ್ಚಕ ಶ್ರೀಶೈಲ ಸ್ವಾಮಿ ಯರಮರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ಶ್ರೀ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಬಳಿಕ ಮಹಾಗಣಾರಾಧನೆ ಹಾಗೂ ಮಹಾಪ್ರಸಾದ ಸಮರ್ಪಣೆ ಜರುಗಲಿದೆ.

ಸಂಜೆ 4 ಗಂಟೆಯಿಂದ ಯರಮರಸ್ ಗ್ರಾಮದಿಂದ ಗುಡ್ಡದ ಬಸವೇಶ್ವರ ದೇವಸ್ಥಾನದವರೆಗೆ ಸುಮಂಗಲೆಯರ ಕಳಸ, ಸಕಲ ವಾದ್ಯಗಳೊಂದಿಗೆ ಶ್ರೀ ನಾಗಯ್ಯ ಸ್ವಾಮಿ ಮಲದಕಲ್ ನೇತೃತ್ವದಲ್ಲಿ ಪುರವಂತಿಕೆ, ನಂದಿಕೋಲು ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ನಡೆದು, ಸಂಜೆ 5ಕ್ಕೆ ಉಚ್ಛಾಯ ಮಹೋತ್ಸವ ಜರುಗಲಿದೆ.

ಸಂಜೆ 7ಕ್ಕೆ ಹರ ಗುರು ಚರಮೂರ್ತಿಗಳ ಆಶೀರ್ವಚನದೊಂದಿಗೆ ಶಿವಾನುಭವ ಗೋಷ್ಠಿ ನಡೆಯಲಿದೆ.

ಭಕ್ತಾದಿಗಳು ತನು-ಮನ-ಧನದಿಂದ ಸೇವೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

projectededore

Recent Posts

ಸಿರವಾರ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಸಿರವಾರ: ಪಟ್ಟಣದ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಭೆಯಲ್ಲಿ…

2 hours ago

ಇಂದಿರಾ ನಗರ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಹೊಸ ರುಚಿ’ ಪ್ರಾತ್ಯಕ್ಷಿಕೆ

ಸಿರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣದ ಇಂದಿರಾ ನಗರದ 'ರಂಗಶಿವ' ಜ್ಞಾನ…

2 hours ago

ಕಿಚ್ಚ ಸುದೀಪ ಜನ್ಮದಿನ; ಅಭಿಮಾನಿಗಳಿಂದ ಆಶ್ರಮಕ್ಕೆ ದಿನಸಿ ಧಾನ್ಯ ವಿತರಣೆ

ಸಿರವಾರ: ಚಿತ್ರನಟ ಕಿಚ್ಚ ಸುದೀಪ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಿರವಾರದ ಸುದೀಪ್ ಅಭಿಮಾನಿ ಯುವ ಬಳಗ ಮಾದರಿಯಾಗಿದೆ.…

3 hours ago

ಬಿಜೆಪಿ ಪಾದಯಾತ್ರೆ ರಾಜಕೀಯ ಪ್ರೇರಿತ: ರಝಾಕ್ ಉಸ್ತಾದ್

ರಾಯಚೂರು: ಲಿಂಗಸ್ಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮೈಲೇಜ್ ಪಡೆಯುವ ಉದ್ದೇಶದಿಂದ…

4 hours ago

ಚಾಗಬಾವಿ ಗ್ರಾಮದಲ್ಲಿ ಜಾಬ್‌ ಕಾರ್ಡ್‌ ಮೇಳ: 55 ಹೊಸ ಅರ್ಜಿಗಳ ಸ್ವೀಕಾರ

ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಚಾಗಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ…

6 hours ago

ಕೆಪಿಎಸ್‌ಸಿ ಹಗರಣಗಳ ಮೂಲ ಬಿಜೆಪಿ–ಜೆಡಿಎಸ್ ಆಡಳಿತದಲ್ಲೇ: ಡಿಕೆ ಶಿವಕುಮಾರ್ ಆರೋಪ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಕ್ಕೆ ಸಂಬಂಧಿಸಿದ ಹಗರಣಗಳ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

6 hours ago