ಸಿರವಾರ: ಚಿತ್ರನಟ ಕಿಚ್ಚ ಸುದೀಪ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಿರವಾರದ ಸುದೀಪ್ ಅಭಿಮಾನಿ ಯುವ ಬಳಗ ಮಾದರಿಯಾಗಿದೆ.
ಜನ್ಮದಿನದ ಅಂಗವಾಗಿ ಅಭಿಮಾನಿಗಳು ಮಾಡಗಿರಿ ಗ್ರಾಮದ ವಾತ್ಸಲ್ಯ ಸೇವಾ ಸಂಸ್ಥೆಯ ಅನಾಥ ಹಾಗೂ ವೃದ್ಧಾಶ್ರಮಕ್ಕೆ ಧವಸಧಾನ್ಯ, ದಿನಬಳಕೆಯ ಆಹಾರ ಪದಾರ್ಥಗಳು ಹಾಗೂ ಹಣ್ಣುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ನಾಯಕ ಆಕಾಶ ನಾಯಕ ಮಾತನಾಡಿ, ಪ್ರತಿವರ್ಷ ಸುದೀಪ್ ಅವರ ಜನ್ಮದಿನವನ್ನು ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಅದಕ್ಕಾಗಿ ಖರ್ಚು ಮಾಡುವ ಹಣವನ್ನು ದುಂದು ವೆಚ್ಚ ಮಾಡದೆ, ಅಭಿಮಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ವಿತರಿಸಲಾಗಿದೆ. ಜನ್ಮದಿನದ ಸಂಭ್ರಮ ಸಮಾಜಮುಖಿ ಕಾರ್ಯದ ಮೂಲಕ ಮತ್ತಷ್ಟು ಅರ್ಥಪೂರ್ಣವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಎಡೆದೊರೆ ನ್ಯೂಸ್
ಈ ಸಂದರ್ಭದಲ್ಲಿ ವಿನೋದ ನಾಯಕ, ರಾಮ ನಾಯಕ, ಶಿವು ಗಡ್ಲ, ಸಾಗರ, ಸೂರಪ್ಪ ನಾಯಕ, ಅನಿಲ, ಉದಯ, ಸೂರಿ ಬಸವ, ರಂಗನಾಥ, ಯಲ್ಲಪ್ಪ ನಾಯಕ, ರವಿ ಆಟೋ, ಮೌನೇಶ ಜಾಲಾಪುರ, ಗೋಪಾಲ, ಮೌನೇಶ, ಗುರು, ಅಶೋಕ ಹಾಗೂ ಸಂದೀಪ ನಾಯಕ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಸಿರವಾರ: ಪಟ್ಟಣದ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಭೆಯಲ್ಲಿ…
ಸಿರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣದ ಇಂದಿರಾ ನಗರದ 'ರಂಗಶಿವ' ಜ್ಞಾನ…
ರಾಯಚೂರು: ಲಿಂಗಸ್ಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮೈಲೇಜ್ ಪಡೆಯುವ ಉದ್ದೇಶದಿಂದ…
ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಚಾಗಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ…
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಕ್ಕೆ ಸಂಬಂಧಿಸಿದ ಹಗರಣಗಳ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ವೈಭವದ ಸರ್ವಸಮರ್ಪಣೋತ್ಸವ, ಮರದ ರಥದಲ್ಲಿ ವಾಹನಗಳ ಮೆರವಣಿಗೆ ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಗುರುವಾರ ವೈಭವದಿಂದ…