Blog

ವಾಲ್ಮೀಕಿ ವಿವಿ : ಇಂಗ್ಲಿಷ್ ವಿಭಾಗ ಮತ್ತು ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಒಂದು ದಿನದ ವಿಚಾರ ಸಂಕೀರಣ

ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಪ್ರೊ.ಬಸವರಾಜ ಪಿ. ಡೊಣೂರು

ರಾಯಚೂರು: ಇಂಗ್ಲಿಷ್ ಕವಿ ವರ್ಡಸರ್ತ್ ಅವರಿಗೆ ನಿಸರ್ಗ ಜೀವಂತ ನಡೆದಾಡುವ ದೇವರಂತೆ ಕಾಣುತ್ತಿದ್ದು, ನಿಸರ್ಗವನ್ನು ಶಿಕ್ಷಕನಂತೆ ನೋಡುತ್ತಿದ್ದ, ವರ್ಡಸ್ವರ್ತ್ ಅವರು ಪ್ರಕೃತಿಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ಹಾಗೂ ಫಾರಿನ್ ಲ್ಯಾಂಗ್ವೇಜ್ ವಿಭಾಗದ ಮುಖ್ಯಸ್ಥರಾದ ಪ್ರೊ.ಬಸವರಾಜ ಪಿ. ಡೊಣೂರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗ ಹಾಗೂ ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ರಿವಿಸಿಟಿಂಗ್ ರೋಮ್ಯಾಂಟಿಸಿಸಮ್: ಕಂಟೇಂ ಇಂಟರ್‌ಪ್ರಿಟೆಶನ್ ಆಫ್ ಬ್ರಿಟೀಷ್ ರೋಮ್ಯಾಂಟಿಕ್ ಪೋಯಟ್ರಿ ಎನ್ನುವ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕರಾದ ಅನಿಲ್ ಅಪ್ರಾಳ್ ಅವರು ಪ್ರಕಟಿಸಿದ ಅಕಾಡೆಮಿಕ್ ಇಂಗ್ಲಿಷ್ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ವರ್ಡ್ಸ್ವರ್ಥ್ ಅವರ ಕಾದಂಬರಿಗಳು ಜೀವನವನ್ನು ಹೇಳುತ್ತದೆ. ಕಾವ್ಯ ಎಂಬುದು ತೀವ್ರವಾದ ಭಾವನೆಗಳ ಸ್ವಯಂ ಪ್ರೇರಿತ ಉಕ್ಕುವಿಕೆ ಅದು ಪ್ರಶಾಂತತೆಯಲ್ಲಿ ನೆನಪಿಸಿಕೊಳ್ಳುವ ಭಾವನೆಗಳಿಂದ ಉದ್ಭವಿಸುತ್ತದೆ ಎನ್ನುವ ವರ್ಡಸ್ವರ್ತ್ ಕವಿಯ ವ್ಯಾಖ್ಯಾನವನ್ನು ವಿಶ್ಲೇಷಿಸುತ್ತಾ ಇಂದು ಮೋಸಗಳ ಜಗತ್ತಿನಲ್ಲಿ ನಾವಿದ್ದೀವಿ ಹಾಗಾಗಿ ಪ್ರಕೃತಿಯನ್ನು ಪ್ರೀತಿಸಿದರೆ ಮೋಸ ಹೋಗಲು ಸಾಧ್ಯವಿಲ್ಲ. ದುರಂತ ಹಾಗೂ ಹಾಸ್ಯ ನಾಟಕಗಳು ನೋಡಬೇಕು, ವಿದ್ಯಾರ್ಥಿಗಳು ಸಾಹಿತ್ಯದ ಪುಸ್ತಕಗಳನ್ನು ಓದುವ ಹುಚ್ಚು ಹೆಚ್ಚಿಸಿಕೊಂಡು ಜ್ಞಾನವೃದ್ಧಿಸಿಕೊಳ್ಳಿ ಎಂದು ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ನಡುವಿನ ಸಂಬAಧ ಅತ್ಯಂತ ಆಳವಾದದ್ದು ಮತ್ತು ಪ್ರಭಾವಶಾಲಿಯಾದದ್ದು. ವರ್ಡಸ್ವರ್ತ, ಕೀಟ್ಸ್, ಶೆಲಿ, ಬೈರನ್ ರಂತಹ ಕಾವ್ಯ ಶೈಲಿಗೆ ಪ್ರಭಾವಿತಗೊಂಡು ಕನ್ನಡದಲ್ಲಿಯೂ ವ್ಯಯಕ್ತಿಕ ಅನುಭವಗಳು ಪ್ರಕೃತಿ ಪ್ರೀತಿ, ಭಾವನೆಗಳಿಗೆ ಹೆಚ್ಚಿನ ಒತ್ತು ನೀಡುವ ಭಾವಗೀತೆಗಳು ರಚನೆಯಾದವು. ಬಿ.ಎ. ಶ್ರೀಕಂಠಯ್ಯ ಅವರ ಇಂಗ್ಲಿಷ ಗೀತೆಗಳು ಕೃತಿಯು ಇದಕ್ಕೆ ನಾಂದಿಯಾಯಿತು. ಅಲ್ಲದೇ ಇಂಗ್ಲಿಷ್ ಸಾಹಿತ್ಯದ ಮೂಲಕ ಕನ್ನಡ ಕವಿಗಳಿಗೆ ಪಾಶ್ಚಿಮಾತ್ಯ ಮಾನವತಾವಾದ, ತಾರ್ಕಿಕ ಚಿಂತನೆ, ಸಾಮಾಜಿಕ ಸುಧಾರಣೆಯ ಆಲೋಚನೆಗಳು ಪರಿಚಯವಾದವು. ಸಾಹಿತ್ಯವನ್ನು ಓದುವುದು ತುಂಬಾ ಅಗತ್ಯ, ಸಾಹಿತ್ಯಕ್ಕೆ ಸಂಬAಧಪಟ್ಟ ಪುಸ್ತಕ, ನಾಟಕಗಳು, ಕಾವ್ಯಗಳು, ಕಾದಂಬರಿಗಳು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು. ಸಮಾಜ, ಸಂಸ್ಕೃತಿ, ರಾಜತಾಂತ್ರಿಕತೆ ಹೇಗೆ ಸಾಹಿತ್ಯಿಕವಾಗಿ ಸಾಹಿತಿಗಳು ಹೇಗೆ ಬರೆದಿದ್ದಾರೆ ಎನ್ನುವುದು ನೀವು ಅರಿತುಕೊಳ್ಳಬಹುದು ಅಲ್ಲದೇ ಸಾಹಿತ್ಯದಲ್ಲಿನ ವೈವಿದ್ಯತೆಗಳು, ವೈಶಿಷ್ಟö್ಯತೆಗಳು ನಮ್ಮ ಜೀವನದಲ್ಲಿ ಸಾಕಷ್ಟು ಪರಿವರ್ತನೆ ಮಾಡುತ್ತದೆ ಎಂದು ಅವರು ತಿಳಿಸಿದರು.

ಗೋಷ್ಠಿ ಒಂದರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಎನ್.ಹೆಚ್.ಕಲ್ಲೂರು ಅವರು ಪಿ.ಬಿ.ಶೆಲ್ಲೆ ಅವರ ಕುರಿತು ಮಾತನಾಡುತ್ತ ತೀವ್ರವಾದ ಭಾವನೆಗಳು, ಕಲ್ಪನಾ ವಿಲಾಸ, ಪ್ರಕೃತಿ ಪ್ರೇಮ, ಅಮೂಲಾಗ್ರ ರಾಜಕೀಯ ಹಾಗೂ ಸಾಮಾಜಿಕ ಆದರ್ಶಗಳು ಶೆಲಿಯವರ ಕಾವ್ಯದ ಪ್ರಮೂಖ ಲಕ್ಷಣಗಳಾಗಿವೆ ಎಂದು ಹೇಳುತ್ತ ಅವರು ಬರೆದಿರುವ ಓಜಿಮಂಡಿಯಾಸ, ಓಡ್ ಟು ದ ವೆಸ್ಟವಿಂಡ್, ಟು ಅ ಸ್ಕೆöÊಲಾರ್ಕ್ ಕವಿತೆಗಳನ್ನು ವಿಶ್ಲೇಷಿಸಿದರು.

ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆಶೀಶ್ ಬೆಲ್ಮಕರ್ ಅವರು ವಿಲಿಯಂ ವರ್ಡ್ಸ್ವರ್ಥ್ ಅವರ ಕುರಿತು ಮಾತನಾಡುತ್ತಾ, ಪ್ರಕೃತಿಯು ಮನುಷ್ಯನಿಗೆ ಅತ್ಯತ್ತಮ ಶಿಕ್ಷಕ, ಮಾರ್ಗದರ್ಶಕ ಮತ್ತು ಸಾಂತ್ವನ ನೀಡುವ ಗೆಳೆಯ ಎಂದು ವರ್ಡ್ಸ್ವರ್ಥ್ ಅವರು ನಂಬಿದ್ದರು. ಅವರು ಸಾಮಾನ್ಯ ಜನರ ಜೀವನವನ್ನು ತಮ್ಮ ಕಾವ್ಯದ ವಸ್ತುವನ್ನಾಗಿಸಿಕೊಂಡರು ಕಾವ್ಯದ ಭಾಷೆ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿರಬೇಕೆಂದು ಪ್ರತಿಪಾದಿಸಿದರು. ಅವರು ತಮ್ಮ ಕಾವ್ಯಗಳಲ್ಲಿ ಮನುಷ್ಯನ ಅಂತರAಗ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬAಧವನ್ನು ಸುಂದರವಾಗಿ ಚಿತ್ರಿಸಿದ್ದಾರೆ ಎಂದರು.

ಗೋಷ್ಠಿ ಎರಡರಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್.ಯಗ್ನಶ್ರೀ ಅವರು ಜಾನ್ ಕೆಟ್ಸ್ ಕುರಿತು ಮಾತನಾಡಿ ಭಾವನಾತ್ಮಕ ತೀವ್ರತೆಗೆ ಹೆಸರಾದ ಜಾನ್ ಕಿಡ್ಸ್ ಅವರ ಕಾವ್ಯ ಸಾಹಿತ್ಯವು ಜಗತ್ಪçಸಿದ್ಧವಾಗಿದೆ. ಕೇವಲ 25 ವರ್ಷಗಳ ಅಲ್ಪಾಯುಷ್ಯದಲ್ಲೇ ಅವರು ಸೃಷ್ಟಿಸಿದ ಸಾಹಿತ್ಯ ಇಂದಿಗೂ ಅಮರವಾಗಿದೆ. ಅವರಿಗೆ ಸೌಂದರ್ಯವೇ ಪರಮ ಸತ್ಯವಾಗಿತ್ತು. ಯಾವುದೇ ಒಂದು ವಿಷಯದ ಬಗ್ಗೆ ತಕ್ಷಣ ತೀರ್ಪುನೀಡದೆ ಸಂದೇಹಗಳ ನಡುವೆಯೂ ಕಾವ್ಯವನ್ನು ಕಾವ್ಯವಾಗಿ ಆಸ್ವಾದಿಸುವ ವಿಶಿಷ್ಟಗುಣವನ್ನು ಅವರು ಪ್ರತಿಪಾದಿಸಿದರು. ಅವರ ಕಾವ್ಯದಲ್ಲಿ ದೃಶ್ಯ ಮತ್ತು ಭಾವನೆಗಳ ಶ್ರೀಮಂತಿಕೆ ಇರುತ್ತದೆ ಎಂದರು.

ವೇದಿಕೆ ಮೇಲೆ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಪಾರ್ವತಿ ಸಿ.ಎಸ್., ವಾಣಿಜ್ಯ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್, ಉಪಸ್ಥಿತರಿದ್ದರು. ಅನಿಲ್ ಅಪ್ರಾಳ್, ಡಾ.ಮೊಹ್ಮದ್ ಆಸೀಫ್, ಫಾತೀಮಾ ಪರ್ವಿನ್ ಉಪಸ್ಥಿತರಿದ್ದರು. 

ಇಂಗ್ಲಿಷ್ ವಿಭಾಗದ ಸಂಯೋಜಕರಾದ ಡಾ.ಆನಂದ ಜೆ ಯರಗೇರಾ ಪ್ರಾಸ್ತಾವಿಕ ಮಾತನಾಡಿದರು, ವಿದ್ಯಾರ್ಥಿಗಳಾದ ಗಂಗಮ್ಮ ಸಂಗಡಿಗರು ಪ್ರಾರ್ಥಿಸಿದರು, ವಿದ್ಯಾರ್ಥಿಗಳಾದ ಪ್ರಸಾದ್ ಸ್ವಾಗತಿಸಿದರು, ಬಸಮ್ಮ, ನಾಗರಾಜ್ ಬಿಲ್ಲಾ, ನಿರೂಪಿಸಿದರು, ಪೂಜಾ, ರಾಜಶೇಖರ್, ಗೌರಮ್ಮ, ಶ್ರೀಹರಿರೆಡ್ಡಿ, ಶ್ರೀದೇವಿ, ಹುಲಿಗೆಮ್ಮ ಅತಿಥಿಗಳನ್ನು ಪರಿಚಯಿಸಿದರು. ಜಯಶ್ರೀ ವಂದಿಸಿದರು, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

projectededore

Recent Posts

ಉತ್ತಾನ ದ್ವಾದಶಿ ಅಂಗವಾಗಿ ಮಂತ್ರಾಲಯ ಶ್ರೀಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವ| ವಿಡಿಯೋ..

ಮಂತ್ರಾಲಯ: ಉತ್ತಾನ ದ್ವಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವ ಮತ್ತು…

12 hours ago

ಶಿಕ್ಷಣವೇ ನಮ್ಮ ಶಕ್ತಿ, ಒಗ್ಗಟ್ಟೇ ನಮ್ಮ ಅಸ್ತ್ರ: ವಡ್ಡರ ಭೋವಿ ಸಮಾಜದ ಸಭೆಯಲ್ಲಿ ಕರೆ

ಸಿರವಾರ: "ನಮ್ಮ ಮಕ್ಕಳು ಓದಿನಿಂದ ದೂರವಾದರೆ, ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಶಿಕ್ಷಣ ಕೊಡಿಸುವುದೇ…

15 hours ago

ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರಿಗೂ ಸಮರ್ಪಕವಾಗಿ ನೀರು ಹರಿಸಿ: ಚಾಮರಸ ಮಾಲಿಪಾಟೀಲ್

ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ…

15 hours ago

ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶ

ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ…

2 days ago

ನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್

ಮಾನ್ವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ನೇಗಿಲುಯೋಗಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ಸುಲಭವಾಗಿ ಮತ್ತು…

2 days ago

ನೀರಾವರಿ ಇಲಾಖೆಯಿಂದ ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡಿ: ಎನ್. ಎಸ್. ಬೋಸುರಾಜು

ಮಾನ್ವಿ:  ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರು ಕೂಡ  ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡದೆ ಇರುವುದರಿಂದ ಮಾನ್ವಿ…

2 days ago