Blog

ರಾಜ್ಯಮಟ್ಟದ ಮಿನಿ ಗೇಮ್ಸ್‌ಗೆ ರಾಯಚೂರಿನ ನಾಲ್ವರು ಬಾಲಕ ಟೇಬಲ್ ಟೆನ್ನಿಸ್ ಆಟಗಾರರು ಆಯ್ಕೆ

ರಾಯಚೂರು: ಕರ್ನಾಟಕ ರಾಜ್ಯದ ಐದನೇ ಮಿನಿ ಗೇಮ್ಸ್‌ಗೆ ರಾಯಚೂರು ಜಿಲ್ಲೆಯ ನಾಲ್ವರು ಬಾಲಕ ಟೇಬಲ್ ಟೆನ್ನಿಸ್ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 14ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಮಿನಿ ಗೇಮ್ಸ್‌ನ 14 ವರ್ಷದೊಳಗಿನ ಬಾಲಕರ ವಿಭಾಗದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ ರಾಯಚೂರು ಜಿಲ್ಲೆಯ ನಾಲ್ವರು ಆಟಗಾರರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಯಚೂರು ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆಯ ಮೂಲಕ ಆಯ್ಕೆಯಾದ ಕ್ರೀಡಾಪಟುಗಳ ವಿವರ ಹೀಗಿದೆ.

  1. ವಸು ರೂಪ – ಇನ್ಸೆಂಟ್ ಜೀಸಸ್ ಶಾಲೆ, ರಾಯಚೂರು.
  2. ಕೆ.ಎನ್. ವಿವೇಕಾನಂದ – ರೇಸ್ ಚಾಣಕ್ಯ ಶಾಲೆ, ರಾಯಚೂರು.
  3. ರಾಜೇಶ್ – ಇನ್ಸೆಂಟ್ ಜೀಸಸ್ ಶಾಲೆ, ರಾಯಚೂರು.
  4. ಯಶವಂತ್ – ಇನ್ಸೆಂಟ್ ಜೀಸಸ್ ಶಾಲೆ, ರಾಯಚೂರು.

ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಉಪಾಧ್ಯಕ್ಷ ನಂದಾಪುರ ಶ್ರೀನಿವಾಸ, ಕಾರ್ಯದರ್ಶಿ ಯು. ಲಕ್ಷ್ಮೀನಾರಾಯಣ ಹಾಗೂ ತರಬೇತುದಾರ ಮಂಚಾಲ್ ವೀರಣ್ಣ ಅಭಿನಂದನೆ ಸಲ್ಲಿಸಿ, ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

projectededore

Recent Posts

ಉತ್ತಾನ ದ್ವಾದಶಿ ಅಂಗವಾಗಿ ಮಂತ್ರಾಲಯ ಶ್ರೀಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವ| ವಿಡಿಯೋ..

ಮಂತ್ರಾಲಯ: ಉತ್ತಾನ ದ್ವಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವ ಮತ್ತು…

12 hours ago

ಶಿಕ್ಷಣವೇ ನಮ್ಮ ಶಕ್ತಿ, ಒಗ್ಗಟ್ಟೇ ನಮ್ಮ ಅಸ್ತ್ರ: ವಡ್ಡರ ಭೋವಿ ಸಮಾಜದ ಸಭೆಯಲ್ಲಿ ಕರೆ

ಸಿರವಾರ: "ನಮ್ಮ ಮಕ್ಕಳು ಓದಿನಿಂದ ದೂರವಾದರೆ, ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಶಿಕ್ಷಣ ಕೊಡಿಸುವುದೇ…

15 hours ago

ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರಿಗೂ ಸಮರ್ಪಕವಾಗಿ ನೀರು ಹರಿಸಿ: ಚಾಮರಸ ಮಾಲಿಪಾಟೀಲ್

ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ…

15 hours ago

ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶ

ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ…

2 days ago

ನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್

ಮಾನ್ವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ನೇಗಿಲುಯೋಗಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ಸುಲಭವಾಗಿ ಮತ್ತು…

2 days ago

ನೀರಾವರಿ ಇಲಾಖೆಯಿಂದ ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡಿ: ಎನ್. ಎಸ್. ಬೋಸುರಾಜು

ಮಾನ್ವಿ:  ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರು ಕೂಡ  ಕಾಲುವೆಯಲ್ಲಿ ಸರಿಯಾಗಿ ಗೇಜ್ ನಿರ್ವಾಹಣೆ ಮಾಡದೆ ಇರುವುದರಿಂದ ಮಾನ್ವಿ…

2 days ago