ರಾಯಚೂರು

ನೀರಮಾನ್ವಿ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರದಲ್ಲಿ ವಿಜಯದಶಮಿ ಆಯುಧ ಪೂಜೆ

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರದಲ್ಲಿ ವಿಜಯದಶಮಿ ಅಂಗವಾಗಿ ಆಯುಧ ಪೂಜೆ ನೆರವೇರಿಸಲಾಯಿತು. ಕೇಂದ್ರದಲ್ಲಿರುವ ಕೃಷಿ ಯಂತ್ರೋಪಕರಣಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಸೇವಾ ಕೇಂದ್ರದ ವಾಹನ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.ನೀರಮಾನ್ವಿ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರ
ಈ ಸಂದರ್ಭದಲ್ಲಿ ಸಿ.ಎಚ್.ಸಿ. ಯೋಜನಾಧಿಕಾರಿ ಮಂಜುನಾಥ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರವು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ತಾಂತ್ರಿಕ ನೆರವು ಹಾಗೂ ಗುಣಮಟ್ಟದ ಯಂತ್ರೋಪಕರಣಗಳ ಸೇವೆ ಒದಗಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಿಕವರಿ ಯೋಜನಾಧಿಕಾರಿ ಪಾತಲಿಂಗಪ್ಪ, ತಾಂತ್ರಿಕ ಅಭಿಯಂತರ ಸಂತೋಷ ಕುಮಾರ್, ಕೇಂದ್ರದ ಪ್ರಬಂಧಕ ಸಿದ್ದರಾಮಯ್ಯ, ತಾಲೂಕು ಕೃಷಿ ಮೇಲ್ವಿಚಾರಕ ಬಸವರಾಜ, ಪ್ರಗತಿಪರ ರೈತರಾದ ಉಮಾಪತಿ, ಅಯ್ಯಪ್ಪನಾಯಕ, ಹನುಮಂತರೆಡ್ಡಿ, ಮಾಲಿ ವಿರೂಪಾಕ್ಷಪ್ಪ ಗೌಡ, ಭೀಮರಾಯ್, ಶಿವರಾಮ್ ಗೌಡ, ಕುರಿ ಯಲ್ಲಪ್ಪ, ಸಣ್ಣರಾಜ ಹಾಗೂ ಗ್ರಾಮದ ಮುಖಂಡರಾದ ಶ್ರೀರಾಮುಲು, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

projectededore

Recent Posts

ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ಮಣ್ಣಿನ ಸ್ನಾನದ ಶಿಬಿರ

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ನಡೆದ ಮಣ್ಣಿನ…

5 hours ago

ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಪ್ರತಿಯೊಬ್ಬರ ಮಾತೃಭಾಷೆಯಾಗಬೇಕು ಎಂದು ಕುಲಸಚಿವ ಡಾ. ಟಿ.…

1 day ago

ಮಂತ್ರಾಲಯದಲ್ಲಿ ಮಕ್ಕಳಿಗಾಗಿ ಉಚಿತ ಸುವರ್ಣಪ್ರಾಶನ ಕಾರ್ಯಕ್ರಮ

ಮಂತ್ರಾಲಯ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೇಂದ್ರ ಆರೋಗ್ಯ ಶಾಲೆಯಲ್ಲಿ ನ.1ರಂದು 16…

1 day ago

ಆಗುಂಬೆ ಬಳಿ ಭೀಕರ ಅಪಘಾತ: ಸಿಂಧನೂರಿನ ಯುವ ವೈದ್ಯ ಡಾ. ಚೇತನಕುಮಾರ ಸ್ಥಳದಲ್ಲೇ ದುರ್ಮರಣ

ಆಗುಂಬೆ ಬಳಿ ಎಕ್ಸ್‌ಯುವಿ ವಾಹನ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ಸಿಂಧನೂರಿನ ಯುವ ವೈದ್ಯ ಡಾ. ಚೇತನಕುಮಾರ (28) ಸ್ಥಳದಲ್ಲೇ ಮೃತಪಟ್ಟಿದ್ದು,…

1 day ago

ವಿಶೇಷ ವರದಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಕನ್ನಡಕ್ಕೇ ಅಪಮಾನ! ಎಐ ಸೃಷ್ಟಿಸಿದ ಶುಭಾಶಯ ಪೋಸ್ಟರ್‌ಗಳಲ್ಲಿ ಅಕ್ಷರಗಳ ಅಪಭ್ರಂಶ; ಕನ್ನಡಾಭಿಮಾನವೋ, ಕೇವಲ ಪ್ರದರ್ಶನವೋ?

ಕನ್ನಡ ರಾಜ್ಯೋತ್ಸವದ ಶುಭಾಶಯ ಪೋಸ್ಟರ್‌ಗಳಲ್ಲಿ ಎಐ ಸೃಷ್ಟಿಸಿದ ಕನ್ನಡ ಅಕ್ಷರದೋಷಗಳು ಚರ್ಚೆಗೆ ಗ್ರಾಸವಾಗಿವೆ. ಅಧಿಕಾರಿಗಳು, ಗಣ್ಯರು, ಕನ್ನಡಪರ ಸಂಘಟನೆಗಳೂ ಎಐ…

1 day ago

ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಡಾ. ಅಜಯ್ ಸಿಂಗ್

ರಾಯಚೂರು: ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ…

2 days ago