ಅಪರಾಧ

ಆಗುಂಬೆ ಬಳಿ ಭೀಕರ ಅಪಘಾತ: ಸಿಂಧನೂರಿನ ಯುವ ವೈದ್ಯ ಡಾ. ಚೇತನಕುಮಾರ ಸ್ಥಳದಲ್ಲೇ ದುರ್ಮರಣ

ರಾಯಚೂರು: ಆಗುಂಬೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ವೈದ್ಯ ಡಾ. ಚೇತನಕುಮಾರ (28) ಮೃತಪಟ್ಟಿದ್ದಾರೆ. ಎಕ್ಸ್‌ಯುವಿ ವಾಹನ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ವೈದ್ಯರನ್ನು ಸಿಂಧನೂರು ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಶರಣೇಗೌಡ ಹಂಚಿನಾಳ ಅವರ ಪುತ್ರ ಡಾ. ಚೇತನಕುಮಾರ ಎಂದು ಗುರುತಿಸಲಾಗಿದೆ. ಅವರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಾ. ಚೇತನಕುಮಾರ ಅವರು ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಐವರು ವೈದ್ಯರು ಒಟ್ಟಾಗಿ ಆಗುಂಬೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನವೆಂಬರ್ 1ರ ಬೆಳಗಿನ ಜಾವ ಸುಮಾರು 5.45ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಎಕ್ಸ್‌ಯುವಿ ವಾಹನವು ಆಗುಂಬೆ ಸಮೀಪ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಸೇವಾ ಮನೋಭಾವದ ಯುವ ವೈದ್ಯನ ಅಕಾಲಿಕ ಸಾವಿನ ಸುದ್ದಿ ಸಿಂಧನೂರು ಹಾಗೂ ಕೆ. ಹೊಸಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

projectededore

Recent Posts

ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ

ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಭವಿಷ್ಯ ಭಾರತ್ ಸಂಸ್ಥೆ ಹಾಗೂ VST ಸಂಜೀವನಿ ವತಿಯಿಂದ ನ.3ರಂದು VST ಫೌಂಡೇಶನ್ ಡೇ-2026…

2 hours ago

ಪುರಸಭೆಯ ಕುಡಿಯುವ ನೀರಿನ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್.ಬೋಸರಾಜು

ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಬಳಿಯಲ್ಲಿನ ಪುರಸಭೆಯ ಕುಡಿಯುವ ನೀರಿನ ಕೆರೆಗೆ ವಿಧಾನ ಪರಿಷತ್ ಸದಸ್ಯ ಎನ್. ಎಸ್…

4 hours ago

ಆರ್ಯವೈಶ್ಯ ಸಂಘದಿAದ ಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ 2 ಲಕ್ಷ ರೂಗಳ ಸಹಾಯದಾನ

ಮಾನ್ವಿ: ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ರಾಯಚೂರಿನಲ್ಲಿ ಇತ್ತಿಚಿಗೆ ದುಷ್ಕರ್ಮಿಯಿಂದ ಕೊಲೆಗೆ ಒಳಗಾದ ಆರ್ಯವೈಶ್ಯ ಸಮುದಾಯದ…

5 hours ago

ಕೃಷ್ಣಾ–ತುಂಗಭದ್ರಾ ನದಿಗಳಿದ್ದರೂ ರೈತರಿಗೆ ನೀರಿನ ಕೊರತೆ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆಗೆ ಕೆ. ಶಿವನಗೌಡ ನಾಯಕ ಆಗ್ರಹ

ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುವಂತಾಗಿದೆ.…

6 hours ago

ಸಿರವಾರ: ಟ್ಯಾಕ್ಸಿ ಕಾರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಟ – ತಹಶೀಲ್ದಾರರಿಗೆ ಮನವಿ

ಸಿರವಾರ: ಪಟ್ಟಣದಲ್ಲಿ ಟ್ಯಾಕ್ಸಿ ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ಸಿರವಾರದ ಟ್ಯಾಕ್ಸಿ ಚಾಲಕರ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ…

7 hours ago

​ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಯುವಜನತೆಯ ಮಾನವೀಯ ಕಾರ್ಯ ಅಭಿನಂದನೀಯ: ನಟರಾಜ್ ಗೌಡ ಪೊಲೀಸ್ ಪಾಟೀಲ್

​ಸಿರವಾರ: "ಆಪತ್ತಿನಲ್ಲಿರುವ ಮತ್ತೊಬ್ಬ ವ್ಯಕ್ತಿಯ ಪ್ರಾಣ ಉಳಿಸುವ ರಕ್ತದಾನವು ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಕೊಡುಗೆಯಾಗಿದೆ. ಇಂದಿನ ದಿನಗಳಲ್ಲಿ…

8 hours ago