ಸಿರವಾರ: ಚಿತ್ರನಟ ಕಿಚ್ಚ ಸುದೀಪ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಿರವಾರದ ಸುದೀಪ್ ಅಭಿಮಾನಿ ಯುವ ಬಳಗ ಮಾದರಿಯಾಗಿದೆ.

ಜನ್ಮದಿನದ ಅಂಗವಾಗಿ ಅಭಿಮಾನಿಗಳು ಮಾಡಗಿರಿ ಗ್ರಾಮದ ವಾತ್ಸಲ್ಯ ಸೇವಾ ಸಂಸ್ಥೆಯ ಅನಾಥ ಹಾಗೂ ವೃದ್ಧಾಶ್ರಮಕ್ಕೆ ಧವಸಧಾನ್ಯ, ದಿನಬಳಕೆಯ ಆಹಾರ ಪದಾರ್ಥಗಳು ಹಾಗೂ ಹಣ್ಣುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ನಾಯಕ ಆಕಾಶ ನಾಯಕ ಮಾತನಾಡಿ, ಪ್ರತಿವರ್ಷ ಸುದೀಪ್ ಅವರ ಜನ್ಮದಿನವನ್ನು ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಅದಕ್ಕಾಗಿ ಖರ್ಚು ಮಾಡುವ ಹಣವನ್ನು ದುಂದು ವೆಚ್ಚ ಮಾಡದೆ, ಅಭಿಮಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ವಿತರಿಸಲಾಗಿದೆ. ಜನ್ಮದಿನದ ಸಂಭ್ರಮ ಸಮಾಜಮುಖಿ ಕಾರ್ಯದ ಮೂಲಕ ಮತ್ತಷ್ಟು ಅರ್ಥಪೂರ್ಣವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಎಡೆದೊರೆ ನ್ಯೂಸ್

ಈ ಸಂದರ್ಭದಲ್ಲಿ ವಿನೋದ ನಾಯಕ, ರಾಮ ನಾಯಕ, ಶಿವು ಗಡ್ಲ, ಸಾಗರ, ಸೂರಪ್ಪ ನಾಯಕ, ಅನಿಲ, ಉದಯ, ಸೂರಿ ಬಸವ, ರಂಗನಾಥ, ಯಲ್ಲಪ್ಪ ನಾಯಕ, ರವಿ ಆಟೋ, ಮೌನೇಶ ಜಾಲಾಪುರ, ಗೋಪಾಲ, ಮೌನೇಶ, ಗುರು, ಅಶೋಕ ಹಾಗೂ ಸಂದೀಪ ನಾಯಕ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

Previous articleಬಿಜೆಪಿ ಪಾದಯಾತ್ರೆ ರಾಜಕೀಯ ಪ್ರೇರಿತ: ರಝಾಕ್ ಉಸ್ತಾದ್
Next articleಇಂದಿರಾ ನಗರ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಹೊಸ ರುಚಿ’ ಪ್ರಾತ್ಯಕ್ಷಿಕೆ