ರಾಯಚೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೂತನ ಪ್ರಾಂಶುಪಾಲರ ನೇಮಕ: ‘ಶೈಕ್ಷಣಿಕ ಸಾರಥ್ಯ’ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ದದ್ದಲ್ ಭಾಗಿ

ರಾಯಚೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣಾ ಸಮಾರಂಭ ‘ಶೈಕ್ಷಣಿಕ ಸಾರಥ್ಯ’ ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಪ್ರಾಂಶುಪಾಲರಿಗೆ ನೇಮಕಾತಿ ಆದೇಶಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ನೂತನ ಪ್ರಾಂಶುಪಾಲರಿಗೆ ಶಾಸಕ ಬಸನಗೌಡ ದದ್ದಲ್ ಶುಭಾಶಯಗಳನ್ನು ಕೋರಿದರು.

ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವಲ್ಲಿ ಪ್ರಾಂಶುಪಾಲರ ಜವಾಬ್ದಾರಿ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣವೇ ಸಮರ್ಥ ಸಮಾಜ ನಿರ್ಮಾಣದ ಅಡಿಪಾಯವಾಗಿದ್ದು, ನೂತನ ಪ್ರಾಂಶುಪಾಲರ ನೇತೃತ್ವದಲ್ಲಿ ಸರ್ಕಾರಿ ಕಾಲೇಜುಗಳು ಶೈಕ್ಷಣಿಕವಾಗಿ ಮತ್ತಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಆಶಿಸಿದರು.

projectededore

Recent Posts

ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಗದಗ: ಭಾರತೀಯ ಜನತಾ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಪ್ರಜಾಪ್ರಭುತ್ವ, ಅರಾಜಕತೆಯಲ್ಲ’ (Democracy, Not Anarchy)…

16 hours ago

ಉತ್ತಾನ ದ್ವಾದಶಿ ಅಂಗವಾಗಿ ಮಂತ್ರಾಲಯ ಶ್ರೀಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವ| ವಿಡಿಯೋ..

ಮಂತ್ರಾಲಯ: ಉತ್ತಾನ ದ್ವಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತುಳಸಿ–ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವ ಮತ್ತು…

2 days ago

ಶಿಕ್ಷಣವೇ ನಮ್ಮ ಶಕ್ತಿ, ಒಗ್ಗಟ್ಟೇ ನಮ್ಮ ಅಸ್ತ್ರ: ವಡ್ಡರ ಭೋವಿ ಸಮಾಜದ ಸಭೆಯಲ್ಲಿ ಕರೆ

ಸಿರವಾರ: "ನಮ್ಮ ಮಕ್ಕಳು ಓದಿನಿಂದ ದೂರವಾದರೆ, ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಶಿಕ್ಷಣ ಕೊಡಿಸುವುದೇ…

2 days ago

ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರಿಗೂ ಸಮರ್ಪಕವಾಗಿ ನೀರು ಹರಿಸಿ: ಚಾಮರಸ ಮಾಲಿಪಾಟೀಲ್

ಮಾನ್ವಿ: ಡಿಸ್ಟ್ರಿಬ್ಯೂಟರ್ 82ರ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ…

2 days ago

ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶ

ಶಹಾಪುರ: ರೈತರ ಬೆಳೆಗಳು ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ. ಏಳು ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ…

3 days ago

ನೇಗಿಲುಯೋಗಿ ಯೋಜನೆಯಡಿಸೇವಾದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭ: ಗುರುನಾಥ ಭೂಸನೂರ್

ಮಾನ್ವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ನೇಗಿಲುಯೋಗಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ಸುಲಭವಾಗಿ ಮತ್ತು…

3 days ago