ಸಿರವಾರ: ಮುಂಗಾರು ಮಳೆ ಕೊರತೆಯಿಂದ ತತ್ತರಿಸಿರುವ ರಾಯಚೂರು ಜಿಲ್ಲೆಯ ಮೂರು ತಾಲೂಕುಗಳು ಸರ್ಕಾರದ ಬರ ಪರಿಶೀಲನಾ ಪಟ್ಟಿಗೆ ಸೇರಿವೆ.

ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗ ಹೊರಡಿಸಿರುವ ಅಧಿಸೂಚನೆಯಂತೆ ಸಿಂಧನೂರು ಮತ್ತು ಸಿರವಾರ ತಾಲೂಕುಗಳನ್ನು ತೀವ್ರ ಬರ ಹಾಗೂ ಮಾನ್ವಿ ತಾಲೂಕನ್ನು ಸಾಧಾರಣ ಬರ ಪರಿಸ್ಥಿತಿಯ ಗ್ರೌಂಡ್ ಟ್ರೂಥಿಂಗ್ ಪರಿಶೀಲನೆಗೆ ಆಯ್ಕೆ ಮಾಡಲಾಗಿದೆ.

ಸೆ. 8ರಿಂದ ಕ್ಷೇತ್ರ ಪರಿಶೀಲನೆ:
ಸೆ.5 ರಿಂದ 7ರವರೆಗೆ ತಂಡ ರಚನೆ ಹಾಗೂ ಗ್ರಾಮಗಳ ಆಯ್ಕೆ ನಡೆಯಲಿದ್ದು, ಸೆ.8 ರಿಂದ 10ರವರೆಗೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ವಾಸ್ತವ ಪರಿಶೀಲನೆ ನಡೆಸಲಿದ್ದಾರೆ. ವರದಿಯನ್ನು ಸೆ.11ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು.

‘ಕ್ರಾಪ್ ಲಾಸ್ ಜಿಟಿ’ ಮೊಬೈಲ್ ಆ್ಯಪ್ ಮೂಲಕ ಜಿಯೋ-ಟ್ಯಾಗ್ ಫೋಟೋ, ಜಿಪಿಎಸ್ ಮಾಹಿತಿಯೊಂದಿಗೆ ಹಾನಿಯನ್ನು ದಾಖಲಿಸಲಾಗುವುದು.

ಬರ ನಿರ್ವಹಣಾ ಕೈಪಿಡಿ 2020ರಂತೆ ಶೇ.33ಕ್ಕಿಂತ ಹೆಚ್ಚು ನಷ್ಟ ದೃಢಪಟ್ಟರೆ ಬರ ಘೋಷಣೆಗೆ ಅರ್ಹವಾಗಲಿದ್ದು, ಶೇ.50ಕ್ಕಿಂತ ಹೆಚ್ಚಿದ್ದರೆ ತೀವ್ರ ಬರ ಎಂದು ಪರಿಗಣಿಸಲಾಗುತ್ತದೆ.

Previous articleಮಂತ್ರಾಲಯದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ: ಅದ್ಧೂರಿಯಾಗಿ ನಡೆದ ಪಿಂಡ್ಲಿ ಉತ್ಸವ
Next articleರಾಯಚೂರಿನಲ್ಲಿ ಸಾರಥಿ ಫೈನಾನ್ಸ್ ನೂತನ ಶಾಖೆ ಆರಂಭ: ಕರ್ನಾಟಕದಲ್ಲಿ 20ನೇ ಶಾಖೆ