ರಾಯಚೂರು

ಮಕ್ಕಳ ಮೇಲಿನ ಶೋಷಣೆ ತಡೆಗೆ ಶಿಕ್ಷಕರು ಜಾಗೃತರಾಗಿರಬೇಕು: ಕಂಚಿ ಮಾಯಣ್ಣ ಗೌತಮ್

ಮಾನ್ವಿ: ಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯ ಪ್ರಕರಣಗಳು ಸಂಭವಿಸುವುದಕ್ಕೂ ಮುನ್ನವೇ ಅವುಗಳನ್ನು ತಡೆಗಟ್ಟಲು ಶಿಕ್ಷಕರು ಮತ್ತು ವಸತಿ ನಿಲಯದ ಸಿಬ್ಬಂದಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಂಚಿ ಮಾಯಣ್ಣ ಗೌತಮ್ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾನಿಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸುರಕ್ಷಿತ್ ಬಚ್‌ಪನ್ ಅಭಿಯಾನ’ದ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆ, ದೇಹದಲ್ಲಿನ ಗಾಯಗಳು ಹಾಗೂ ಅವರ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಂತಹ ವ್ಯತ್ಯಾಸಗಳ ಮೂಲಕ ಮಗುವಿನ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಗುರುತಿಸಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರೆ ಅನಾಹುತಗಳನ್ನು ತಡೆಯಬಹುದು. ಅಂತರ್ಜಾಲದಲ್ಲಿ ಮಕ್ಕಳಿಗೆ ಸಂಬಂಧಿಸಿದ ನಿಷೇಧಿತ ವಿಷಯಗಳನ್ನು ಕುತೂಹಲಕ್ಕಾಗಿ ಹುಡುಕುವುದೂ ಕಾನೂನುಬಾಹಿರವಾಗಿದ್ದು, ಅಗತ್ಯವಿದ್ದಲ್ಲಿ ಮಕ್ಕಳು ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ಉಚಿತ ಕಾನೂನು ನೆರವು ಪಡೆಯಬಹುದು ಎಂದು ತಿಳಿಸಿದರು.

ಕಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ ಹೆಚ್. ಕೊಣ್ಣೂರು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು, ಶೋಷಣೆಗೆ ಒಳಗಾದ ಮಕ್ಕಳ ವಿಚಾರಣೆಯನ್ನು ಕಾಯ್ದೆಯಡಿ ಸುರಕ್ಷಿತವಾಗಿ ಹಾಗೂ ಮಕ್ಕಳ ಸ್ನೇಹಿ ವಾತಾವರಣದಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗದೆ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾನ್ವಿ ಪೊಲೀಸ್ ಠಾಣೆಯ ಎಎಸ್‌ಐ ಹನುಮೇಶ ಬೊಮ್ಮನಾಳ್, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ವಕೀಲರಾದ ಯಲ್ಲಪ್ಪ ಹಿರೇಬಾದರದಿನ್ನಿ, ಶಿವಪ್ಪನಾಯಕ, ದತ್ತಾತ್ರೇಯ ಹಿರೇಕೊಟ್ನೆಕಲ್, ಶ್ರೀನಿವಾಸ ನಂದಿಹಾಳ್, ಶಶಿಕಾಂತಯ್ಯ, ಚನ್ನಬಸವನಾಯಕ, ಶಕೀಲಬಾದಯಿ, ಶ್ರೀದೇವಿ ಬಳಿಗಾರ, ನಿರ್ಮಲಾ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ವಿಜಯ ಎಸ್.ಕೆ., ನಿಲಯ ಪಾಲಕಿ ಮಂಜುಳಾ, ತಾಲೂಕು ಶಿಕ್ಷಣ ಸಂಯೋಜಕಿ ರಾಚಮ್ಮ, ಸಿಆರ್‌ಪಿ ಸೋಮಶೇಖರ, ಬಿಆರ್‌ಪಿ ಸಿದ್ದಲಿಂಗೇಶ್ವರ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

projectededore

Recent Posts

ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ

ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಭವಿಷ್ಯ ಭಾರತ್ ಸಂಸ್ಥೆ ಹಾಗೂ VST ಸಂಜೀವನಿ ವತಿಯಿಂದ ನ.3ರಂದು VST ಫೌಂಡೇಶನ್ ಡೇ-2026…

3 hours ago

ಪುರಸಭೆಯ ಕುಡಿಯುವ ನೀರಿನ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್.ಬೋಸರಾಜು

ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಬಳಿಯಲ್ಲಿನ ಪುರಸಭೆಯ ಕುಡಿಯುವ ನೀರಿನ ಕೆರೆಗೆ ವಿಧಾನ ಪರಿಷತ್ ಸದಸ್ಯ ಎನ್. ಎಸ್…

5 hours ago

ಆರ್ಯವೈಶ್ಯ ಸಂಘದಿAದ ಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ 2 ಲಕ್ಷ ರೂಗಳ ಸಹಾಯದಾನ

ಮಾನ್ವಿ: ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ರಾಯಚೂರಿನಲ್ಲಿ ಇತ್ತಿಚಿಗೆ ದುಷ್ಕರ್ಮಿಯಿಂದ ಕೊಲೆಗೆ ಒಳಗಾದ ಆರ್ಯವೈಶ್ಯ ಸಮುದಾಯದ…

6 hours ago

ಕೃಷ್ಣಾ–ತುಂಗಭದ್ರಾ ನದಿಗಳಿದ್ದರೂ ರೈತರಿಗೆ ನೀರಿನ ಕೊರತೆ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆಗೆ ಕೆ. ಶಿವನಗೌಡ ನಾಯಕ ಆಗ್ರಹ

ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುವಂತಾಗಿದೆ.…

7 hours ago

ಸಿರವಾರ: ಟ್ಯಾಕ್ಸಿ ಕಾರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಟ – ತಹಶೀಲ್ದಾರರಿಗೆ ಮನವಿ

ಸಿರವಾರ: ಪಟ್ಟಣದಲ್ಲಿ ಟ್ಯಾಕ್ಸಿ ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ಸಿರವಾರದ ಟ್ಯಾಕ್ಸಿ ಚಾಲಕರ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ…

9 hours ago

​ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಯುವಜನತೆಯ ಮಾನವೀಯ ಕಾರ್ಯ ಅಭಿನಂದನೀಯ: ನಟರಾಜ್ ಗೌಡ ಪೊಲೀಸ್ ಪಾಟೀಲ್

​ಸಿರವಾರ: "ಆಪತ್ತಿನಲ್ಲಿರುವ ಮತ್ತೊಬ್ಬ ವ್ಯಕ್ತಿಯ ಪ್ರಾಣ ಉಳಿಸುವ ರಕ್ತದಾನವು ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಕೊಡುಗೆಯಾಗಿದೆ. ಇಂದಿನ ದಿನಗಳಲ್ಲಿ…

9 hours ago