ರಾಯಚೂರು

ಸಿರವಾರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಜಂಟಿ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಭೇಟಿ

​ಸಿರವಾರ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಪ್ರಭಾರಿ ಜಿಲ್ಲಾ ಉಸ್ತುವಾರಿ ಶ್ರೀ ಉಜ್ವಲ್ ಕುಮಾರ್ ಘೋಷ್ ಅವರು ತಾಲೂಕಿನ ಹರವಿ, ಹಿರೇಹಣಗಿ ಹಾಗೂ ಕವಿತಾಳ ಪಟ್ಟಣಗಳಿಗೆ ಬುಧವಾರ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಖುದ್ದು ಪರಿಶೀಲಿಸಿದರು.

​ಕೇಂದ್ರ ಸರ್ಕಾರದ ‘ಸಂಪೂರ್ಣತಾ ಮಹತ್ವಾಕಾಂಕ್ಷಿ ಕಾರ್ಯಕ್ರಮ’ದಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಯಲ್ಲಿ ಭಾಗವಹಿಸಿ, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ, ​ಆರೋಗ್ಯ ವಲಯ ಮತ್ತು ಗರ್ಭಿಣಿಯರ ಆರೈಕೆ, ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾವಣೆಯ ಅರಿವು ಮೂಡಿಸಲು ಸೂಚಿಸಿದರು. ‘ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ’ದಡಿ ಗರ್ಭಿಣಿಯರ ತಪಾಸಣೆ, ತಾಯಿಕಾರ್ಡ್ ಹಾಗೂ ಮೂಲಸೌಕರ್ಯಗಳ ನಿರ್ವಹಣೆಯನ್ನು ಪರಿಶೀಲಿಸಿದರು.

​ಅಂಗನವಾಡಿ ಉಸ್ತುವಾರಿ,ಅಂಗನವಾಡಿ ಕೇಂದ್ರ-23ರ ಪರಿಶೀಲನೆ ನಡೆಸಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ನಿರಂತರ ನಿಗಾ ವಹಿಸುವುದು, ತೂಕ ತಪಾಸಣೆ ಹಾಗೂ ಪೌಷ್ಟಿಕ ಆಹಾರ ಪೂರೈಕೆಯನ್ನು ಖಾತರಿಪಡಿಸಲು ನಿರ್ದೇಶನ ನೀಡಿದರು.

​ಉದ್ಯೋಗ ಖಾತ್ರಿ ಹಾಗೂ ಜಲ ಜೀವನ ಮಿಷನ್, ಹರವಿ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ವಿ.ಬಿ.ಜಿ. ರಾಮ್‌ಜಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸೂಕ್ತ ಉದ್ಯೋಗ ಒದಗಿಸಲು ಸೂಚಿಸಿದರು.

ಬಳಿಕ ಹಿರೇಹಣಗಿ ಗ್ರಾಮದಲ್ಲಿ ಮನೆ-ಮನೆಗೆ ನಳ ಸಂಪರ್ಕದ ವ್ಯವಸ್ಥೆಯನ್ನು ಪರಿಶೀಲಿಸಿದರು.
​ಶಿಕ್ಷಣ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್, ಕವಿತಾಳದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಬೋಧಿಸಿ, ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಿಸಿದರು. ನಂತರ ಶಾಲೆಯ ‘ಅಟಲ್ ಟಿಂಕರಿಂಗ್ ಲ್ಯಾಬ್’ನಲ್ಲಿ (ATL) ವಿದ್ಯಾರ್ಥಿಗಳು ರೂಪಿಸಿದ್ದ ಸೆನ್ಸಾರ್, ಸ್ಮಾರ್ಟ್ ವಿದ್ಯಾಲಯ ಹಾಗೂ 3D ಪ್ರಿಂಟರ್ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿಕೊಂಡರು.

​ಈ ತನಿಖಾ ಭೇಟಿಯ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಡಿಎಚ್‌ಒ ಡಾ. ನಂದಿತಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓ ಪ್ರದೀಪ ನಂದರೆಡ್ಡಿ,ಸ್ಥಳೀಯ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

projectededore

Recent Posts

‘ಪ್ರೇರಣಾ’ – ವಿ. ಎಸ್. ಕಾಂತನವರ ಹಿಂದಿ ಕಾವ್ಯ ಸುಮಗುಚ್ಛ

ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ…

3 weeks ago

ಶಾಸಕ ಬಸನಗೌಡ ದದ್ದಲ್‌ರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…

3 weeks ago

ಮಟಮಾರಿಯಲ್ಲಿ ₹3 ಕೋಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ; ಕುರ್ಡಿಯಲ್ಲಿ ₹25 ಲಕ್ಷದ ಸಮುದಾಯ ಭವನ ಉದ್ಘಾಟನೆ

ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮ್ಯಾಕ್ರೋ ಯೋಜನೆಯಡಿ ₹3…

3 weeks ago

ಸತೀಶ್ ಜಾರಕಿಹೊಳಿ ಮೇಲಿನ ED ದಾಳಿ ಖಂಡಿಸಿ ಸಿರವಾರದಲ್ಲಿ ಪಂಜಿನ ಮೆರವಣಿಗೆ

ಸಿರವಾರ: ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ED ದಾಳಿ ನಡೆಸಿದೆ ಎಂದು ಆರೋಪಿಸಿ,…

3 weeks ago

ರಾಯಚೂರಿನಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ

ರಾಯಚೂರು: ನಗರದ ಪೋತಗಲ್ ರಸ್ತೆಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ…

3 weeks ago

ವಾರ್ಡ್ ನಂ.22ರ ಮನೆ-ಮನೆಗೆ ಭೇಟಿ: ನಿವಾಸಿಗಳ ಸಮಸ್ಯೆ ಆಲಿಸಿದ ರಾಮನಗೌಡ ಏಗನೂರು

ರಾಯಚೂರು: ನಗರದ ವಾರ್ಡ್ ನಂ.22ರಲ್ಲಿ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಅವರು ಭಾನುವಾರ ಮನೆ-ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು…

3 weeks ago