ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟ ಹಾಗೂ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ ಎಂ. ಅವರ ಸಂಘಟನಾ ನಾಯಕತ್ವವನ್ನು ಮೆಚ್ಚಿ ನಗರದ ಹೊರವಲಯದ ಅಸ್ಕಿಹಾಳ ನಗರದಲ್ಲಿ ನೂರಾರು ಯುವಕರು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಗೊಂಡರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ ಎಂ. ಮಾತನಾಡಿ, ನಗರ ಹಾಗೂ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಸವಾಲುಗಳು ಎದುರಾಗುತ್ತಿದ್ದು, ಕನ್ನಡಿಗರ ಹಿತಾಸಕ್ತಿ ಹಾಗೂ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದರು.
ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗೆ ಸದಾ ಬದ್ಧವಾಗಿದೆ. ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರತಿಯೊಂದು ತಾಲೂಕು, ವಾರ್ಡ್ ಹಾಗೂ ಗ್ರಾಮಗಳಲ್ಲಿ ಸಂಘಟನೆಯ ಘಟಕಗಳನ್ನು ಸ್ಥಾಪಿಸಿ, ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಯುತ್ತಿದೆ. ವಾರ್ಡ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದ ಬಳಿಕ ಇದೀಗ ಪ್ರತಿ ಹಳ್ಳಿಯಲ್ಲೂ ಕರವೇ ಸಂಘಟನೆಯನ್ನು ವಿಸ್ತರಿಸುವ ಮೂಲಕ ಶಕ್ತಿ ಹೆಚ್ಚಿಸಲಾಗುತ್ತಿದೆ ಎಂದರು.
ಗಡಿಭಾಗಗಳಲ್ಲಿ ಕನ್ನಡ ಭಾಷೆಯ ರಕ್ಷಣೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕರ್ನಾಟಕ ರಾಜ್ಯೋತ್ಸವದ ನಂತರ ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರ ಹೋರಾಟಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಉಮಾಪತಿ ಅವರ ನೇತೃತ್ವದಲ್ಲಿ ಯುವಕರು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಗೊಂಡರು. ಹನುಮೇಶ, ಈರೇಶ, ಬಾಲರಾಜ, ವಸಂತ, ಮಹೇಂದ್ರ, ನಶಿರ್ ಖಾನ್, ಪ್ರವೀಣ್ ನಾಯಕ, ವಿಶ್ವನಾಥ, ಶ್ರೀನಿವಾಸ್, ಶಿವಕುಮಾರ ನಾಯಕ ಸೇರಿದಂತೆ ಹಲವು ಯುವಕರು ಸಂಘಟನೆ ಸೇರಿದರು.
ಈ ಸಂದರ್ಭದಲ್ಲಿ ವೀರೇಶ್ ಸೋನಾ, ಎಂ.ಡಿ. ಸಾಧಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ನಡೆದ ಮಣ್ಣಿನ…
ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಪ್ರತಿಯೊಬ್ಬರ ಮಾತೃಭಾಷೆಯಾಗಬೇಕು ಎಂದು ಕುಲಸಚಿವ ಡಾ. ಟಿ.…
ಮಂತ್ರಾಲಯ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೇಂದ್ರ ಆರೋಗ್ಯ ಶಾಲೆಯಲ್ಲಿ ನ.1ರಂದು 16…
ಆಗುಂಬೆ ಬಳಿ ಎಕ್ಸ್‌ಯುವಿ ವಾಹನ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ಸಿಂಧನೂರಿನ ಯುವ ವೈದ್ಯ ಡಾ. ಚೇತನಕುಮಾರ (28) ಸ್ಥಳದಲ್ಲೇ ಮೃತಪಟ್ಟಿದ್ದು,…
ಕನ್ನಡ ರಾಜ್ಯೋತ್ಸವದ ಶುಭಾಶಯ ಪೋಸ್ಟರ್‌ಗಳಲ್ಲಿ ಎಐ ಸೃಷ್ಟಿಸಿದ ಕನ್ನಡ ಅಕ್ಷರದೋಷಗಳು ಚರ್ಚೆಗೆ ಗ್ರಾಸವಾಗಿವೆ. ಅಧಿಕಾರಿಗಳು, ಗಣ್ಯರು, ಕನ್ನಡಪರ ಸಂಘಟನೆಗಳೂ ಎಐ…
ರಾಯಚೂರು: ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ…