ರಾಯಚೂರು

ಓಂ ಸಾಯಿ ಧ್ಯಾನ ಮಂದಿರದಲ್ಲಿ ಭಿಕ್ಷಾಟನೆ ನಿಷೇಧ ಜಾಗೃತಿ ಪೋಸ್ಟರ್ ಬಿಡುಗಡೆ

ರಾಯಚೂರು: ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರದಲ್ಲಿ ಭಿಕ್ಷಾಟನೆ ನಿಷೇಧ ಜಾಗೃತಿ ಹಾಗೂ ಪುನರ್ವಸತಿ ಕುರಿತ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಜಾಗೃತಿ ಅಭಿಯಾನದ ಭಾಗವಾಗಿ ಅ.19ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿರಾಶಿತರ ಕೇಂದ್ರದ ವಾರ್ಡನ್ ಆದೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಓಂ ಸಾಯಿ ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ್ ಆದೋನಿ ಅವರ ಸಾನ್ನಿಧ್ಯದಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಕಿರಣ್ ಆದೋನಿ, ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹಾಗೂ ನಿರ್ಗತಿಕರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಭಿಕ್ಷಾಟನೆಯ ಸಮಸ್ಯೆ ನಿವಾರಿಸಿ, ನಿರ್ಗತಿಕರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡುವ ಮೂಲಕ ಭಿಕ್ಷಾಟನೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಅಭಿಯಾನದಡಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಗೌರವಯುತ ಪುನರ್ವಸತಿ, ಕೌಶಲ್ಯ ತರಬೇತಿ, ಜೀವನೋಪಾಯಕ್ಕೆ ಅಗತ್ಯ ಬೆಂಬಲ ಹಾಗೂ ಆಪ್ತಸಮಾಲೋಚನೆ ಒದಗಿಸುವ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶ ಹೊಂದಲಾಗಿದೆ.

ಸಾರ್ವಜನಿಕರು ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರು ಅಥವಾ ನಿರಾಶ್ರಿತರನ್ನು ಕಂಡಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಇದಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ 10581 ಹಾಗೂ ಸಹಾಯವಾಣಿ ಸಂಖ್ಯೆ 94823 00400 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಓಂ ಸಾಯಿ ಧ್ಯಾನ ಮಂದಿರವು ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಅನ್ನದಾನ, ಮಾನವೀಯ ಸೇವೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ ಇರ್ಷಾದ್ ಮಿಯಾ, ಜಮ್ಲಪ್ಪ, ವೀರೇಶ್, ತಾಯಿರಾಜ್, ರಜಿಯಾ ಬೇಗಂ, ಲಕ್ಷ್ಮಿ ಸೇರಿದಂತೆ ಅನೇಕ ಸಾಯಿ ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

projectededore

Recent Posts

ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ

ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಭವಿಷ್ಯ ಭಾರತ್ ಸಂಸ್ಥೆ ಹಾಗೂ VST ಸಂಜೀವನಿ ವತಿಯಿಂದ ನ.3ರಂದು VST ಫೌಂಡೇಶನ್ ಡೇ-2026…

5 hours ago

ಪುರಸಭೆಯ ಕುಡಿಯುವ ನೀರಿನ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್.ಬೋಸರಾಜು

ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಬಳಿಯಲ್ಲಿನ ಪುರಸಭೆಯ ಕುಡಿಯುವ ನೀರಿನ ಕೆರೆಗೆ ವಿಧಾನ ಪರಿಷತ್ ಸದಸ್ಯ ಎನ್. ಎಸ್…

8 hours ago

ಆರ್ಯವೈಶ್ಯ ಸಂಘದಿAದ ಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ 2 ಲಕ್ಷ ರೂಗಳ ಸಹಾಯದಾನ

ಮಾನ್ವಿ: ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ರಾಯಚೂರಿನಲ್ಲಿ ಇತ್ತಿಚಿಗೆ ದುಷ್ಕರ್ಮಿಯಿಂದ ಕೊಲೆಗೆ ಒಳಗಾದ ಆರ್ಯವೈಶ್ಯ ಸಮುದಾಯದ…

8 hours ago

ಕೃಷ್ಣಾ–ತುಂಗಭದ್ರಾ ನದಿಗಳಿದ್ದರೂ ರೈತರಿಗೆ ನೀರಿನ ಕೊರತೆ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆಗೆ ಕೆ. ಶಿವನಗೌಡ ನಾಯಕ ಆಗ್ರಹ

ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುವಂತಾಗಿದೆ.…

9 hours ago

ಸಿರವಾರ: ಟ್ಯಾಕ್ಸಿ ಕಾರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಟ – ತಹಶೀಲ್ದಾರರಿಗೆ ಮನವಿ

ಸಿರವಾರ: ಪಟ್ಟಣದಲ್ಲಿ ಟ್ಯಾಕ್ಸಿ ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ಸಿರವಾರದ ಟ್ಯಾಕ್ಸಿ ಚಾಲಕರ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ…

11 hours ago

​ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಯುವಜನತೆಯ ಮಾನವೀಯ ಕಾರ್ಯ ಅಭಿನಂದನೀಯ: ನಟರಾಜ್ ಗೌಡ ಪೊಲೀಸ್ ಪಾಟೀಲ್

​ಸಿರವಾರ: "ಆಪತ್ತಿನಲ್ಲಿರುವ ಮತ್ತೊಬ್ಬ ವ್ಯಕ್ತಿಯ ಪ್ರಾಣ ಉಳಿಸುವ ರಕ್ತದಾನವು ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಕೊಡುಗೆಯಾಗಿದೆ. ಇಂದಿನ ದಿನಗಳಲ್ಲಿ…

11 hours ago