ರಾಯಚೂರು

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ-ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ

ಅರಕೇರಾ : ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಸ್ಪರ್ಧೆಯಲ್ಲೂ ಸೋಲು-ಗೆಲುವು ಸಹಜ. ಗೆಲುವು ನಿಶ್ಚಿತವಲ್ಲ, ಸೋಲು ಅಂತಿಮವಲ್ಲ. ಸೋತವರು ಹತಾಶರಾಗದೆ ಮುಂದಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ ಮತ್ತು ಪ್ರತಿಭೆಯನ್ನು ಧೈರ್ಯದಿಂದ ಪ್ರದರ್ಶಿಸಬೇಕು. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಅವರಲ್ಲಿನ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಮಂಜುನಾಥ ಪೂಜಾರಿ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಲು ವರ್ಷವಿಡೀ ಶ್ರಮಿಸುತ್ತಾರೆ. ಆದರೆ ಕೇವಲ ಪಠ್ಯಪುಸ್ತಕದ ವಿಷಯಗಳನ್ನು ಕಲಿತರೆ ಸಾಲದು, ಮಕ್ಕಳಲ್ಲಿನ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಕ್ಕೂ ಪ್ರೋತ್ಸಾಹ ನೀಡಬೇಕು. ಓದಿನ ಮೂಲಕ ಕಷ್ಟವೆನಿಸುವ ವಿಷಯಗಳನ್ನು ಹಾಡು ಹಾಗೂ ಕಲಾ ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಯಬಹುದು ಎಂದು ಹೇಳಿದರು.

ಸಿಆರ್ ಪಿ ಬಸವರಾಜ, ಶಿಕ್ಷಕರಾದ ಸಂಗಪ್ಪ ಕೋಟೆಕಲ್, ಅಬೀಬಾ, ಹನುಮಂತ್ರಾಯ, ಜಲೀಲ್ ಸಾಬ, ಬಸ್ಸಪ್ಪ ಅಂಗಡಿ, ಶರಣಪ್ಪ, ಸಾವಿತ್ರಮ್ಮ, ರಮೇಶ ಪವಾರ, ಮಂಜುಳಾ, ಸುಜಾತ, ಆನಂದ, ಕೆ.ಎನ್ ಹುಣಸಿಕಟ್ಟಿ ಇತರರಿದ್ದರು.

projectededore

Recent Posts

ಮಾನ್ವಿ: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಶಾಸಕ ಹಂಪಯ್ಯ ನಾಯಕ ಸೂಚನೆ

ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಕುಡಿಯುವ…

18 hours ago

ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ, ವಿಡಿಯೋ: ಮಾನ್ವಿಯಲ್ಲಿ ಪ್ರತಿಭಟನೆ, ಕಠಿಣ ಕ್ರಮಕ್ಕೆ ಆಗ್ರಹ

ಮಾನ್ವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ ಮತ್ತು ವಿಡಿಯೋ ಪ್ರಸಾರ ಮಾಡಿರುವುದನ್ನು ಖಂಡಿಸಿ ಪಟ್ಟಣದ…

18 hours ago

ಕುಡಿಯುವ ನೀರಿಗಾಗಿ ಪರದಾಟ: ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು

​ ಸಮಸ್ಯೆ ಬಗೆಹರಿಸಲು ವಾರ್ಡ್ ನಂ. 03ರ ನಿವಾಸಿಗಳ ಆಗ್ರಹ ​ಸಿರವಾರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 03ರ…

18 hours ago

ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ – 38 ಬಾಟಲಿ ವಶ, ಆರೋಪಿ ಬಂಧನ

ರಾಯಚೂರು: ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೇತಾಜಿ ನಗರ ಠಾಣೆ ಪೊಲೀಸರು…

18 hours ago

ಕಾರ್ತಿಕ ಪೂರ್ಣಿಮೆ: ನ.24ರಂದು ಮಂತ್ರಾಲಯದಲ್ಲಿ ತುಂಗಾರತಿ, ಲಕ್ಷದೀಪೋತ್ಸವ

ಮಂತ್ರಾಲಯ: ಕಾರ್ತಿಕ ಪೂರ್ಣಿಮೆಯ ಅಂಗವಾಗಿ ನವೆಂಬರ್ 24ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಪವಿತ್ರ ತುಂಗಭದ್ರಾ ನದಿ ತೀರದಲ್ಲಿ 'ತುಂಗಾರತಿ–ಪುಣ್ಯನದಿ…

21 hours ago

ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಗದಗ: ಭಾರತೀಯ ಜನತಾ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಪ್ರಜಾಪ್ರಭುತ್ವ, ಅರಾಜಕತೆಯಲ್ಲ’ (Democracy, Not Anarchy)…

2 days ago