ರಾಯಚೂರು

ತಾಲೂಕು ಆಡಳಿತದಿಂದ ಕಾಲುವೆ ನೀರು ಹಂಚಿಕೆ ಕುರಿತು ರೈತರ ಸಭೆ


ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಸಭೆಯಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಕೋನೆ ವಂತಿನ ನೀರನ್ನು ತಾಲೂಕಿನ ವಿವಿಧ ಉಪ ಕಾಲೂವೆಗಳ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿನ ಜೋಳದ ಬೆಳೆಗಾದರು ಸಮರ್ಪಕವಾಗಿ ನೀರು ತಲುಪಿಸುವುದಕ್ಕೆ ಕಾಲುವೆಗಳ ಮೇಲೆ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗುವುದು ಅಕ್ರಮವಾಗಿ ಕಾಲುವೆಯಿಂದ ನೀರು ಪಡೆದುಕೊಳ್ಳುವವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ರೈತರು ಸಹಕಾರ ನೀಡುವಂತೆ ಕೋರಿದರು.

ಸಿರವಾರ ನೀರವಾರಿ ಇಲಾಖೆಯ ಎ.ಇ.ಇ. ವಿಜಯಲಕ್ಷಿö್ಮ ಮಾತನಾಡಿ ಐ.ಸಿ.ಸಿ.ಸಲಹಾ ಸಮಿತಿಯ ನಿರ್ಣಯದಂತೆ ಪ್ರತಿ ಡಿಸ್ಟೂಬ್ಯೂಟರ್‌ಗೆ 3 ದಿನಗಳಂತೆ ವಂತು ಪ್ರಕಾರ ನೀರು ನೀಡಿ ಬಂದ್ ಮಾಡಲಾಗುವುದು. ಇರುವ 9 ದಿನಗಳಲ್ಲಿ ಎಡದಂಡೆ ಕಾಲೂವೆಯಲ್ಲಿ ಗೇಜ್ ಸಮರ್ಪಕವಾಗಿ ದೊರೆಯದೆ ಇದ್ದರು ಸಿಬ್ಬಂದಿಗಳ ಕೋರತೆಯ ನಡುವೆಯು ಕಾಲುವೆಯಲ್ಲಿ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು 82 ಡಿಸ್ಟಿಬ್ಯೂಟರ್ ಪಿಯೋ 189 ವರೆಗಿನ ವ್ಯಾಪ್ತಿಯಲ್ಲಿನ ಗವಿಗಟ್ಟ, ತಾಯಮ್ಮ ಕಟ್ಟೆ ಭಾಗಕ್ಕೆ ಜೋಳದ ಬೆಳೆಗೆ ಅದ್ಯತೆ ನೀಡಿ 3 ದಿನಗಳ ಕಾಲ ರೋಟೆಷನ್ ನಂತೆ ಮಂಗಳವಾರದಿಂದ 3 ದಿನಗಳ ಕಾಲ ನೀರು ಹರಿಸಲಾಗುವುದು. 89 ನೇ ಉಪಕಾಲುವೆ ವ್ಯಾಪ್ತಿಯಲ್ಲಿ ಬರುವ ನೀರಾಮಾನ್ವಿ,ಬೆಟ್ಟದೂರು, ಬೆಟ್ಟದೂರು ತಾಂಡಗಳಿಗೆ ಸೋಮವಾರ ದಿಂದ ಶುಕ್ರವಾರದ ವರೆಗೆ ನೀರು ಹರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. 82 ಡಿಸ್ಟಿçಬ್ಯೂಟರ್ ಕೆಳಭಾಗದ ಜಾನೆಕಲ್ .ಮಲ್ಲಿನ ಮಡಗು,ನಸ್ಲಪುರ ವರೆಗೆ ಮಂಗಳವಾರದಿಂದ 3 ದಿನಗಳಕಾಲ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಮಾತನಾಡಿ ಉಪಕಾಲುವೆಗಳಲ್ಲಿ ಸರಿಯಾಗಿ ಗೇಜ್ ನಿರ್ವಹಣೆ ಮಾಡುತ್ತಿಲ್ಲ ಕಾಲುವೆಗೆ 4.1 ಮೀಟರ್ ನೀರು ಹರಿಸಿದಲ್ಲಿ ಮಾತ್ರ ಕೋನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವುದಕ್ಕೆ ಸಾಧ್ಯಬಾಗಲಿದೆ ಕಾಲುವೆಯಲ್ಲಿ ಟ್ರಾಕ್ಟರ್ ಪಂಪ್‌ಗಳನ್ನು ಬಳಸಿ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ ಹಾಗೂ ಕಾಲುವೆ ನೀರು ಬಳಸಿ ಕೆರೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ ಅದ್ದರು ಕೂಡ ನೀರವಾರಿ ಇಲಾಖೆಯಿಂದ ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಕೋನೆ ಭಾಗಕ್ಕೆ ನೀರು ಬರುತ್ತಿಲ್ಲ ಇರುವ 12 ದಿನಗಳಲ್ಲಿ ಈ ಭಾಗದ ಜೋಳ ,ಮೆಣಸಿನಕಾಯಿ ಬೆಳೆಗಳಿಗೆ ಕೊನೆ ನೀರು ತಲುಪಿಸದೆ ಇದ್ದರೆ ರೈತರಿಗೆ ಹೆಚ್ಚಿನ ನಷ್ಟವಾಗುತ್ತದೆ. ಎಂದು ತಿಳಿಸಿದರು.

ಸಭೆಯಲ್ಲಿ ಪಿ.ಐ.ಸೋಮಶೇಖರ ಎಸ್. ಕೆಂಚರೆಡ್ಡಿ, ರೈತ ಮುಖಂಡರಾದ ದೊಡ್ಡಬಸವನಗೌಡ ಬಲ್ಲಟ್ಟಗಿ, ಸೂಗೂರಯ್ಯ ಆರ್.ಎಸ್.ಮಠ್,ಬಸವನಗೌಡ ಮಲ್ಲನಮಡಗು,ಲಿಂಗಣ್ಣ ಪಾಟೀಲ್,ಬಸವನಗೌಡ ಮಾಲಿ ಪಾಟೀಲ್ ಬೆಟ್ಟದೂರು,ಶಂಕ್ರಪ್ಪಗೌಡ ದೇವತಗಲ್, ಕಾಡಪ್ಪ,ಶರಣಪ್ಪ,ವಿಕ್ರಮಗೌಡ ಗವಿಗಟ್ಟ,ಉಮೇಶ ಬೆಟ್ಟದೂರು, ಸಿದ್ದನಗೌಡ,ಕುಂಬರ ಮಾಯಪ್ಪ ,ಮಲ್ಲಿಕಾರ್ಜುನಗೌಡ ಮಾಲಿಪಾಟೀಲ್, ಡಿ.ರಾಮಕೃಷ್ಣ, ಎಂ.ಶ್ರೀನೀವಾಸ, ಕೆ.ಬುಡ್ಡಣ್ಣ, ರುದ್ರಮೂರ್ತಿ, ಚನ್ನಬಸವ, ಮಹಾಂತೇಶ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

projectededore

Recent Posts

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ-ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ

ಅರಕೇರಾ : ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಎಸ್ಡಿಎಂಸಿ…

5 hours ago

ಮಾನ್ವಿ: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಶಾಸಕ ಹಂಪಯ್ಯ ನಾಯಕ ಸೂಚನೆ

ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಕುಡಿಯುವ…

22 hours ago

ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ, ವಿಡಿಯೋ: ಮಾನ್ವಿಯಲ್ಲಿ ಪ್ರತಿಭಟನೆ, ಕಠಿಣ ಕ್ರಮಕ್ಕೆ ಆಗ್ರಹ

ಮಾನ್ವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ ಮತ್ತು ವಿಡಿಯೋ ಪ್ರಸಾರ ಮಾಡಿರುವುದನ್ನು ಖಂಡಿಸಿ ಪಟ್ಟಣದ…

22 hours ago

ಕುಡಿಯುವ ನೀರಿಗಾಗಿ ಪರದಾಟ: ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು

​ ಸಮಸ್ಯೆ ಬಗೆಹರಿಸಲು ವಾರ್ಡ್ ನಂ. 03ರ ನಿವಾಸಿಗಳ ಆಗ್ರಹ ​ಸಿರವಾರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 03ರ…

22 hours ago

ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ – 38 ಬಾಟಲಿ ವಶ, ಆರೋಪಿ ಬಂಧನ

ರಾಯಚೂರು: ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೇತಾಜಿ ನಗರ ಠಾಣೆ ಪೊಲೀಸರು…

22 hours ago

ಕಾರ್ತಿಕ ಪೂರ್ಣಿಮೆ: ನ.24ರಂದು ಮಂತ್ರಾಲಯದಲ್ಲಿ ತುಂಗಾರತಿ, ಲಕ್ಷದೀಪೋತ್ಸವ

ಮಂತ್ರಾಲಯ: ಕಾರ್ತಿಕ ಪೂರ್ಣಿಮೆಯ ಅಂಗವಾಗಿ ನವೆಂಬರ್ 24ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಪವಿತ್ರ ತುಂಗಭದ್ರಾ ನದಿ ತೀರದಲ್ಲಿ 'ತುಂಗಾರತಿ–ಪುಣ್ಯನದಿ…

1 day ago